– ಕೊಲೆಗೈದು 100ಗೆ ಕರೆ ಮಾಡಿದ್ದೇಕೆ?
ಭೋಪಾಲ್: ತಂದೆಯನ್ನು ಹೊಡೆದು ಕೊಂದು ಬಳಿಕ 16ರ ಬಾಲಕಿಯೊಬ್ಬಳು 100 ಕರೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬುಧವಾರ ಸಂಜೆ ತಂದೆ ಕುಡಿದು ಬಂದು ತಾಯಿ ಮೇಲೆ ಹಲ್ಲೆ ಮಾಡುತ್ತಿದ್ದನು. ಇದರಿಂದ ನೊಂದ ಬಾಲಕಿ ಬಟ್ಟೆ ಒಗೆಯಲು ಬಳಸುವ ವಸ್ತುವಿನಿಂದ ತಂದೆಯನ್ನೇ ಹೊಡೆದು ಹತ್ಯೆ ಮಾಡಿದ್ದಾಳೆ. ತನ್ನ ತಂದೆಯನ್ನು ಕೊಲೆ ಮಾಡಿದ ಬಳಿಕ ಆಕೆ 100ಗೆ ಕರೆ ಮಾಡಿದ್ದಾಳೆ. ಅಲ್ಲದೆ ಪೊಲೀಸರಿಗೆ ಶರಣಾಗಿದ್ದಾಳೆ.
ಬಾಲಕಿಯ ತಂದೆ ನಿರುದ್ಯೋಗಿಯಾಗಿದ್ದು, ಹಿರಿಯ ಮಗನನ್ನು ಅವಲಂಬಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಾಯಿಗೆ ತಂದೆ ಹೊಡೆಯುತ್ತಿದ್ದರು ಎಂದು ಬಾಲಕಿ ಆರೋಪ ಮಾಡಿದ್ದಾಳೆ.
ಘಟನೆ ನಡೆದ ದಿನ ಬಾಲಕಿಯ ಕುಟುಂಬ ಹಿರಿಯ ಮಗನ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಬಾಲಕಿಯ ತಂದೆ ಜಗಳವಾಡಲು ಪಾರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಬ್ಯಾಟ್ ಎತ್ತಿಕೊಂಡು ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ತಾವವಾಗಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯನ್ನು ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದೆ.