ಮುಂಬೈ: ತಂದೆಗೆ ಊಟಕೊಡಲು ಬೈಕ್ನಲ್ಲಿ ಹೋಗುತ್ತಿದ್ದಾಗ ಬಸ್ ಹರಿದ ಪರಿಣಾಮ ಬೈಕ್ನಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ವಿಶಾಲ್ ವಿಕ್ರಮ್ ಕುಯೇಶ್ಕರ್(18) ಎಂದು ಗುರುತಿಸಲಾಗಿದೆ. ಈತ ಗೊರೆಗಾಂವ್ ಪಶ್ಚಿಮದ ಮಿಥಾ ನಗರದ ಎಂಜಿ ರಸ್ತೆಯಲ್ಲಿರುವ ಗ್ಯಾಲಕ್ಸಿ ಕ್ಲಾಸಿಕ್ ಸೊಸೈಟಿ ನಿವಾಸಿಯಾಗಿದ್ದಾನೆ. ಗೊರೆಗಾಂವ್ ವೆಸ್ಟ್ ಲಿಂಕ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪರಿಚಿತ ಬಸ್ ಚಾಲಕನ ವಿರುದ್ಧ ಬಂಗೂರ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಕುಯೇಶ್ಕರ್ ಅವರ ತಂದೆ ವಿಕ್ರಮ್ ಹೇಳುವ ಪ್ರಕಾರ ಸಂಜೆ 5 ಗಂಟೆಗೆ, ನನ್ನ ಮಗ ಮಲಾಡ್ ನಲ್ಲಿರುವ ನನ್ನ ಕಚೇರಿಯಲ್ಲಿ ನನಗೆ ಡಬ್ಬಾ ನೀಡಲು ಮನೆಯಿಂದ ಹೊರಟನು. ಆದಾಗ್ಯೂ, ಅವನು ಸಂಜೆ 5:30ರ ಆದರೂ ಬಂದು ತಲುಪಲಿಲ್ಲ. ಹಾಗಾಗಿ ನಾನು ನನ್ನ ಹೆಂಡತಿಯನ್ನು ಕರೆ ಮಾಡಿ ಎಲ್ಲಿದ್ದಾನೆ ಎಂದು ವಿಚಾರಿಸು ಎಂದಿದ್ದೆ. ಅವನು ಅರ್ಧ ಘಂಟೆಯ ಹಿಂದೆ ಮನೆಯಿಂದ ಹೊರಟು ಹೋದನೆಂದು ಅವಳು ಹೇಳಿದಳು. ಗಾಬರಿಯಿಂದ ನಾನು ಮಗನ ಮೊಬೈಲ್ಗೆ ಕರೆ ಮಾಡಿದೇನು. ಆದರೆ ಅಪರಿಚಿತ ವ್ಯಕ್ತಿಯೊಬ್ಬರು ಫೆÇೀನ್ ಎತ್ತಿಕೊಂಡು ವಿಶಾಲ್ ಅಪಘಾತಕ್ಕೀಡಾಗಿದ್ದೇನೆ ಎಂದು ಹೇಳಿದರು. ಪೊಲೀಸರು ವಿಶಾಲ್ ಅವರನ್ನು ವ್ಯಾನ್ ನಲ್ಲಿ ಶತಾಬ್ದಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವನು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಿದರು.
Advertisement
Advertisement
ಕುಯೇಶ್ಕರ್ ಪ್ರಥಮ ವರ್ಷದ ಬಿಎಂಎಸ್ (ಬ್ಯಾಚುಲರ್ ಮ್ಯಾನೇಜ್ಮೆಂಟ್ ಸ್ಟಡೀಸ್) ವಿದ್ಯಾರ್ಥಿಯಾಗಿದ್ದನು. ತಂದೆಗೆ ಟಿಫಿನ್ ತಲುಪಿಸಲು ಹೋಗುತ್ತಿದ್ದವನಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ನಂತರ ಆರೋಪಿ ಚಾಲಕ ವಾಹನವನ್ನು ಸಹ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಅಪರಿಚಿತ ಬಸ್ ಚಾಲಕನ ವಿರುದ್ಧ ಹಿಟ್-ಅಂಡ್-ರನ್ ಪ್ರಕರಣ ದಾಖಲಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದೇವೆ. ಓಡುತ್ತಿರುವ ಬಸ್ ಹರಿದ ಪರಿಣಾಮ ಯುವಕನ ದೇಹದ ತುಂಬಾ ಗಾಯಗಳಾಗಿದ್ದವು. ಆರೋಪಿ ಬಸ್ ಚಾಲಕನನ್ನು ಪತ್ತೆ ಹಚ್ಚಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 304 (ಎ), 279 ಅಥವಾ ಸಾರ್ವಜನಿಕ ಮಾರ್ಗದಲ್ಲಿ ವೇಗದ ಸವಾರಿ ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.