ಲಕ್ನೋ: ಕೊರೊನಾ ಲಾಕ್‍ಡೌನ್ ನಡುವೆಯೂ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಬೊಂಬೆ ಜೊತೆ ಮದುವೆಯಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
90 ವರ್ಷದ ಶಿವ ಮೋಹನ್ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕೆ ಮಗನಿಗೆ ಬೊಂಬೆ ಜೊತೆ ಮದುವೆ ಮಾಡಿಸಿದ್ದಾರೆ. ಅದರಂತೆಯೇ ತಂದೆಯ ಕೊನೆ ಆಸೆಗಾಗಿ ಮಗ ಮರದ ಬೊಂಬೆ ಜೊತೆ ಮದುವೆ ಮಾಡಿಕೊಂಡಿದ್ದಾನೆ.
“ನನಗೆ 9 ಗಂಡು ಮಕ್ಕಳಿದ್ದಾರೆ, ಅವರಲ್ಲಿ ಎಂಟು ಮಂದಿಗೆ ಮದುವೆಯಾಗಿದೆ. ಆದರೆ ಕಿರಿಯವನಿಗೆ ಯಾವುದೇ ಆಸ್ತಿ ಇಲ್ಲ ಮತ್ತು ಬುದ್ಧಿವಂತನೂ ಅಲ್ಲ. ಆದ್ದರಿಂದ ನಾನು ಅವನನ್ನು ಬೊಂಬೆಯ ಜೊತೆ ಮದುವೆ ಮಾಡಿಸಿದ್ದೇನೆ” ಎಂದು ತಂದೆ ಶಿವ ಮೋಹನ್ ತಿಳಿಸಿದರು.
ಮರದಲ್ಲಿ ಮಾಡಿದ್ದ ವಧು ಬೊಂಬೆಗೆ ಕೆಂಪು ರೇಷ್ಮೆ ಮತ್ತು ಹೂವುಗಳಿಂದ ಅಲಂಕರ ಮಾಡಲಾಗಿತ್ತು. ಅಲ್ಲದೇ ವಿವಾಹದ ಸಂದರ್ಭದಲ್ಲಿ ನಡೆಸಲಾಗುವ ಎಲ್ಲಾ ಶಾಸ್ತ್ರಗಳನ್ನೂ ಮಾಡುವ ಮೂಲಕ ಬೊಂಬೆ ಜೊತೆ ಮದುವೆ ಮಾಡಲಾಗಿದೆ. ಅಂದರೆ ವಧು-ವರ ಹೂಮಾಲೆ ಬದಲಾಯಿಸಿಕೊಳ್ಳುವುದು, ವಿವಾಹವಾದ ಬಳಿಕ ಸಪ್ತಪದಿ ತುಳಿಯುವುದು ಸೇರಿದಂತೆ ಪ್ರತಿಯೊಂದು ಶಾಸ್ತ್ರವನ್ನು ಮಾಡಲಾಗಿದೆ. ಮದುವೆಯನ್ನು ಮಾಡಿಸಲು ಪುರೋಹಿತರು ಕೂಡ ಹಾಜರಿದ್ದರು.
ಶಿವ್ ಮೋಹನ್ ಸಾಯುವ ತಮ್ಮ ಎಲ್ಲ ಗಂಡು ಮಕ್ಕಳ ಮದುವೆಯನ್ನು ನೋಡಬೇಕೆಂದು ಆಸೆಪಟ್ಟಿದ್ದರು. ಆದರೆ ಕೊನೆಗೆ ಮಗನಿಗೆ ಇನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ಬೊಂಬೆ ಜೊತೆ ಮದುವೆ ಮಾಡಿಸಲಾಗಿದೆ ಎಂದು ಕುಟುಂಬದರು ತಿಳಿಸಿದ್ದಾರೆ. ಈ ಮದುವೆಯಲ್ಲಿ ಕೆಲ ಸಂಬಂಧಿಕರು ಸಹ ಹಾಜರಿದ್ದರು.
Prayagraj: A man was married to an effigy in Ghurpur as per his father's wish. Father of the bridegroom says, "I have 9 sons of which 8 were married. My 9th son has no property and is not intelligent, so I got him married to an effigy. (18.06.2020) pic.twitter.com/FiONuWdAQO
— ANI UP/Uttarakhand (@ANINewsUP) June 18, 2020