-ನನ್ನಲ್ಲಿ ದಿವ್ಯಶಕ್ತಿ ಇದೆ ಎಂದ ಮಹಿಳೆ
ಲಕ್ನೋ: ತಂತ್ರ ಮಂತ್ರದ ಮೊರೆಗಾಗಿ ಮಹಿಳೆ ತನ್ನ ಎಂಟು ವರ್ಷದ ಮಗಳನ್ನ ಕೊಲೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಗು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿಯನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೊಳಾಗದ ಮಹಿಳೆ ಆರಂಭದಲ್ಲಿ ತನಗೆ ದಿವ್ಯಶಕ್ತಿಯ ಬಲವಿದೆ ಎಂಬಿತ್ಯಾದಿ ಮಾತುಗಳನ್ನಾಡಿದ್ದಾಳೆ. ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನ ಕೊಂದು ಶವವನ್ನ ಬಿಸಾಡಿರುವ ರಸ್ತೆಯನ್ನ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಮಗಳ ಮನೆಗೆ ಬಂದು ಏಕಾಏಕಿ ಪುತ್ರಿ, ಅಳಿಯನ ಮೇಲೆ ಗುಂಡು ಹಾರಿಸಿದ ತಂದೆ
ಪಲ್ವಲ್ ವ್ಯಾಪ್ತಿಯ ಬಗೋಲಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮೂಢನಂಬಿಕೆ ಮಾತುಗಳನ್ನಾಡಿದ್ದ ಮಹಿಳೆ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಮೊದಲು ನೀರಿನ ಟ್ಯಾಂಕ್ ನಲ್ಲಿ ಮಗಳನ್ನ ಮುಳುಗಿಸಿ ಕೊಲ್ಲಲುಪ್ರಯತ್ನಿಸಿದ್ದಳು. ಆದ್ರೆ ಜನರು ಬಂದು ಬಾಲಕಿಯನ್ನ ರಕ್ಷಣೆ ಮಾಡಿದ್ದರು. ಇದನ್ನೂ ಓದಿ: ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ
ಮೂರು ದಿನಗಳ ಮಗಳು ಕಾಣೆಯಾಗಿರುವ ಬಗ್ಗೆ ಬಾಲಕಿಯ ತಂದೆ ರಾಜೇಶ್, ಸಂಜಯ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರಿಗೆ ಆತನ ಪತ್ನಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೂಢನಂಬಿಕೆಯಲ್ಲಿರುವ ತಾಯಿ ತಂತ್ರ ಮಂತ್ರಗಳ ಮೊರೆಗಾಗಿ ಮಗಳನ್ನ ಕೊಲೆ ಮಾಡಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕ್ರೈಂ ಬ್ರಾಂಚ್ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ