– ಡ್ರೋನ್ ಮೂಲಕ ಹೆಚ್ಚು ಶಸ್ತ್ರಾಸ್ತ್ರ ಪೂರೈಸುತ್ತಿರುವ ಉಗ್ರರು
ಶ್ರೀನಗರ: ಪಾಕ್ ಭಯೋತ್ಪಾದಕರು ಶಸ್ತ್ರಾಸ್ತ್ರ ಕೊರತೆಯನ್ನು ನೀಗಿಸಲು ಹಾಗೂ ಸಮರ್ಪಕವಾಗಿ ಪೂರೈಕೆ ಮಾಡಲು ಹೊಸ ಉಪಾಯವನ್ನು ಕಂಡುಕೊಂಡಿದ್ದು, ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಹಾಗೂ ಮದ್ದು, ಗುಂಡುಗಳನ್ನು ಪೂರೈಕೆ ಮಾಡಲು ಡ್ರೋನ್ ಬಳಕೆ ಮಾಡುತ್ತಿದ್ದಾರೆ.
Advertisement
ಶುಕ್ರವಾರ ಜಮ್ಮು ಕಾಶ್ಮೀರ ಪೊಲೀಸರು ಕಾಶ್ಮೀರ ಕಣಿವೆ ಮೂಲದ ಮೂವರು ಲಷ್ಕರ್ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತ ಮೂವರು ದಕ್ಷಿಣ ಕಾಶ್ಮಿರದ ಪುಲ್ವಾಮಾ ಹಾಗೂ ಶೋಪಿಯಾನ್ನಿಂದ ರಾಜೌರಿಗೆ ಬಂದು ಡ್ರೋನ್ಗಳ ಮೂಲಕ ಬಿಡಲಾಗಿದ್ದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದರು.
Advertisement
ಶುಕ್ರವಾರ ರಾತ್ರಿ ಡ್ರೋನ್ಗಳು ಎರಡು ಎಕೆ-56 ಬಂದೂಕು, 180 ಸುತ್ತಿನ ಆರು ಎಕೆ ಮ್ಯಾಗಝೈನ್, 3 ಬಂದೂಕು ಮ್ಯಾಗಝೈನ್, 30 ರೌಂಡ್ನ 2 ಚೀನಿ ಬಂದೂಕುಗಳು, ನಾಲ್ಕು ಗ್ರನೇಡ್ ಹಾಗೂ ಎರಡು ಪೌಚ್ಗಳನ್ನು ಕೆಳಗೆ ಬಿಟ್ಟಿದ್ದವು. ಇವುಗಳನ್ನು ಕೊಂಡೊಯ್ಯಲು ಉಗ್ರರು ಆಗಮಿಸಿದ ವೇಳೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪುಲ್ವಾಮಾದ ರಾಹಿಲ್ ಬಶೀರ್ ಹಾಗೂ ಅಮಿರ್ ಜಾನ್ ಅಲಿಯಾಸ್ ಹಮ್ಜಾ ಎಂದು ಗುರುತಿಸಲಾಗಿದೆ. ಹಫೀಜ್ ಯೂನುಸ್ ವಾನಿಯನ್ನು ಶೋಪಿಯಾನ್ ಮೂದವ ಎನ್ನಲಾಗಿದೆ. ಮೂವರು ಉಗ್ರರಿಂದ ಒಂದು ಲಕ್ಷ ರೂ. ನಗದನ್ನು ಸಹ ವಶಪಡಿಸಿಕೊಳ್ಳಲಾಗಿದೆ.
Advertisement
Advertisement
ಗಡಿಗಳನ್ನು ನಿರ್ವಹಿಸುವ ಬಿಎಸ್ಎಫ್ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಬಿಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅಲರ್ಟ್ ಆಗಿದ್ದಾರೆ. ಇತ್ತೀಚೆಗೆ ಎಂಟು ಇದೇ ರೀತಿಯ ಘಟನೆಗಳು ನಡೆದಿರುವುದು ಪತ್ತೆಯಾಗಿದೆ. ಇದೇ ರೀತಿಯ ಒಂದು ಡ್ರೋನ್ನ್ನು ಕತುವಾ ಬಳಿ ಬಿಎಸ್ಎಫ್ ಯೋಧರು ಇತ್ತೀಚೆಗೆ ಹೊಡೆದುರುಳಿಸಿದ್ದಾರೆ. ಅಲ್ಲದೆ ಜವಾಹರ್ ಸುರಂಗದ ಬಳಿ ಮೂರು ಡ್ರೋನ್ ಹಾರಾಟವನ್ನು ತಡೆಹಿಡಿಯಲಾಗಿದೆ ಎಂದು ಸೇನೆಯ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.