ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬೆಲ್‍ಬಾಟಮ್ ಖ್ಯಾತಿಯ ಹೀರೋ ರಿಷಬ್ ಶೆಟ್ಟಿಯವರು ತನ್ನ ಕನಸಿನ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ.
ಡಿ ಬಾಸ್ ದರ್ಶನ್ ಅವರು ಬೈಕ್ ಮತ್ತು ಕಾರಿನ ಬಗ್ಗೆ ಹೆಚ್ಚಿನ ಕ್ರೇಜ್ ಹೊಂದಿರುವ ನಾಯಕನಟ. ದರ್ಶನ್ ಅವರು ಲ್ಯಾಂಬೋರ್ಗಿನಿ, ಪೋರ್ಷೆ ಕಂಪನಿಯ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಂತೆಯೇ ಚಿಂಗಾರಿಯ ಬಳಿ ಹಳದಿ ಬಣ್ಣದ ಫೋರ್ಡ್ ಮಸ್ಟಂಗ್ ಕಾರು ಕೂಡ ಇದೆ. ಈ ಕಾರು ರಿಷಬ್ ಶೆಟ್ಟಿಯವರ ನೆಚ್ಚಿನ ಕಾರಗಿದ್ದು, ಇದರಲ್ಲಿ ರಿಷಬ್ ದರ್ಶನ್ ಜೊತೆ ರೈಡ್ ಹೋಗಿದ್ದಾರೆ.
ನನ್ನ ಡ್ರೀಮ್ ಕಾರ್ @FordMustang ನಿನ್ನೆ ಸಂಜೆ ದರ್ಶನ್ ಸರ್ ತಮ್ಮ #MustangGT ನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. Thank you @dasadarshan sir.???????????????? Had a great time ????????????❤ pic.twitter.com/58TQcJ53Rc
— Rishab Shetty (@shetty_rishab) December 4, 2020
ಈ ವಿಚಾರವನ್ನು ತಮ್ಮ ಟ್ವಿಟ್ಟರಿನಲ್ಲಿ ಫೋಟೋ ಹಂಚಿಕೊಂಡಿರುವ ರಿಷಬ್ ಅವರು, ನನ್ನ ಕನಸಿನ ಕಾರು ಫೋರ್ಡ್ ಮಸ್ಟಂಗ್. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಫೋರ್ಡ್ ಮಸ್ಟಂಗ್ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ನಿಮಗೆ ದರ್ಶನ್ ಸರ್ ನಿಮ್ಮ ಜೊತೆ ಒಳ್ಳೆಯ ಸಮಯವನ್ನು ಕಳೆದೆ ಎಂದು ಬರೆದುಕೊಂಡಿದ್ದಾರೆ.
2018ರಲ್ಲಿ ಸಂಕ್ರಾಂತಿ ಹಬ್ಬದೊಂದು ದರ್ಶನ್ ಅವರು ಈ ಮಸ್ಟಂಗ್ ಕಾರನ್ನು ಖರೀದಿ ಮಾಡಿದ್ದರು. ಈ ಕಾರಿನ ಬೆಲೆ ಅಂದು 75 ಲಕ್ಷ ಆಗಿದ್ದು, ಅದರ ವಿನ್ಯಾಸದ ಖರ್ಚು ಎಲ್ಲ ಸೇರಿ ಅನ್‍ರೋಡ್ ಬೆಲೆ ಒಂದು ಕೋಟಿಯಾಗಿತ್ತು. ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೇಂಜ್ ರೋವರ್, ಫಾಚ್ರ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಇತ್ತೀಚೆಗೆ ಲ್ಯಾಂಬೋರ್ಗಿನಿಯನ್ನು ಖರೀದಿಸಿದ್ದರು.
ಸದ್ಯ ದರ್ಶನ್ ಅವರು ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿದಿದೆ. ಸದ್ಯ ಅವರು ವೀರ ಮದಕರಿ ನಾಯಕ ಸಿನಿಮಾದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸ್ನೇಹಿತರ ಜೊತೆ ದರ್ಶನ್ ಅವರು ಮಡಿಕೇರಿಗೆ ಜಾಲಿ ರೈಡ್ ಕೂಡ ಹೋಗಿ ಬಂದಿದ್ದರು. ರಿಷಬ್ ಶೆಟ್ಟಿಯವರು ಹೀರೋ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಸದ್ಯ ‘ಹರಿಕಥೆಯಲ್ಲ ಗಿರಿಕಥೆ’ ಎಂಬ ಸಿನಿಮಾದಲ್ಲಿ ರಿಷಬ್ ನಿರತರಾಗಿದ್ದಾರೆ.