ಧಾರವಾಡ: ಬೈಕ್‍ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಹೊರ ವಲಯದ ತಡಸಿನಕೊಪ್ಪ ಗ್ರಾಮದ ಗೌಡ್ರ ಓಣಿಯ ಗೋವಿಂದ ಭೀಮಪ್ಪ ಬಂಗಾರಿ (25) ಬಂಧಿತ ಆರೋಪಿ. ಕಳೆದ 20 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪರಮೇಶ್ವರ ಎಂಬವರು ತಮ್ಮೂರಿಗೆ ಹೋಗಲು ನಿಂತಾಗ, ಗೋವಿಂದ ಬೈಕ್‍ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ನಂಬಿಸಿದ್ದಾನೆ. ಆ ಬಳಿಕ ಬೈಪಾಸ್ ಯರಿಕೊಪ್ಪ ಸೇತುವೆ ಬಳಿ ಕರೆದುಕೊಂಡು ಹೋಗಿ ಹೆದರಿಸಿ, ಹೊಡೆದು ಅವರಲ್ಲಿದ್ದ 5 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದ. ಇದನ್ನೂ ಓದಿ: ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಓಡಿದ ಆಸ್ಪತ್ರೆ ವೈದ್ಯ, ಸಿಬ್ಬಂದಿ
ಹಣ ದೋಚಿ ಪರಾರಿಯಾದ ಬಗ್ಗೆ ಗೋವಿಂದನ ಮೇಲೆ ದಾಖಲಾಗಿದ್ದ ದೂರಿನ ಅನ್ವಯ ತನಿಖೆ ಕೈಗೊಂಡ ಧಾರವಾಡ ವಿದ್ಯಾಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿ, ಈತನಿಂದ 50 ಸಾವಿರ ಮೌಲ್ಯದ ಬೈಕ್, 3500 ರೂ. ನಗದು ವಶಪಡಿಸಿಕೊಂಡಿದ್ದಾರೆ.