ಧಾರವಾಡ: ಡ್ರಗ್ ಕೇಸ್‍ನಲ್ಲಿ ಈಗ ಹೊರ ಬಂದಿರೋದು ಟಿಪ್ ಆಫ್ ದಿ ಐಸ್ ಬರ್ಗ್ ಅಷ್ಟೇ ಎಂದು ಆಂತರಿಕ ಭದ್ರತಾ ದಳ (ಐಎಸ್‍ಡಿ) ಮುಖ್ಯಸ್ಥ ಭಾಸ್ಕರ್ ರಾವ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಡ್ರಗ್ ಕೇಸಿನಲ್ಲಿ ಪೆಡ್ಲರ್ ಮತ್ತು ಗ್ರಾಹಕರವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಅದು ಪತ್ತೆ ಮಾಡಬೇಕಿದೆ ಎಂದು ಹೇಳಿದರು. ಕೆಮಿಕಲ್ ಮತ್ತು ಆರ್ಟಿಫಿಷಿಯಲ್ ಡ್ರಗ್ ಹೊರ ದೇಶದಿಂದ ಬರುತ್ತಿದೆ ಎಂದರು.
Advertisement
Advertisement
ಡ್ರಗ್ಸ್ ಸಮುದ್ರ ಮತ್ತು ವಿಮಾನ ನಿಲ್ದಾಣದಿಂದ ಬರುತ್ತಿದೆಯಾ ನೋಡಿ ಭದ್ರತೆಯನ್ನು ಬಿಗಿ ಮಾಡಬೇಕಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಶಾಮೀಲಾಗಿದ್ದಾರಾ? ಅವರ ಪಾತ್ರ ಏನು ಎಂದು ಶೋಧಿಸುವ ಕಾರ್ಯವನ್ನು ಐಎಸ್‍ಡಿ ಮಾಡುತ್ತಿದೆ. ಇದೇ ವೇಳೆ ಕಸ್ಟಮ್ ಅಧಿಕಾರಿಗಳು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ನನ್ನ ಆರೋಪ ಇದೆ. ಇದರಲ್ಲಿ ಕೊರಿಯರ್ ನವರು ಕೆಲವು ಕಡೆ ಶಾಮಿಲು ಆಗಿದ್ದಾರೆ ಎಂದು ಹೇಳಿದರು.
Advertisement
Advertisement
ಕೊರೊನಾ ಸಂದರ್ಭದಲ್ಲಿ ನಾನು ಬೆಂಗಳೂರು ಪೊಲೀಸ್ ಆಯುಕ್ತನಾಗಿದ್ದಾಗ, ನನ್ನ ಕೈಯಿಂದ ಆದಷ್ಟು ಸಿಬ್ಬಂದಿಗೆ ಸಹಾಯ ಮಾಡಿದ್ದೇನೆ. ಪ್ರತಿ ಠಾಣೆಯ 55 ವರ್ಷ ಮೇಲ್ಪಟ್ಟ ಪೇದೆಗಳು ಹಾಗೂ ಅಧಿಕಾರಿಗಳಿಗೆ ಮನೆಯಲ್ಲೇ ಇರಲು ಹೇಳಿದ್ದೆ ಎಂದು ಭಾಸ್ಕರ್ ರಾವ್ ಅವರು ಈ ವೇಳೆ ನೆನಪಿಸಿಕೊಂಡರು.