ಡ್ರಗ್ಸ್ ಸುಳಿಯಲ್ಲಿ ಸಾರಾ, ರಕುಲ್ ಪ್ರೀತ್ ಸಿಂಗ್ – ಎನ್‍ಸಿಬಿ ಸಮನ್ಸ್

Public TV
2 Min Read
Sara rakul

-ಶುರುವಾಯ್ತು ಬಿಟೌನ್‍ನಲ್ಲಿ ಢವ ಢವ
-ಚೆಲುವೆಯರಿಗೆ ಕಂಟಕವಾಗುತ್ತಾ ರಿಯಾ ಹೇಳಿಕೆ?

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಕಲೆವರಿಗೆ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ನಟಿ ರಿಯಾ ಚಕ್ರವರ್ತಿ ನೀಡಿರುವ ಹೇಳಿಕೆಯನ್ನಾಧರಿಸಿ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ.

sara ali khan

ಡಿಸೈನರ್ ಸಿಮೋನ್ ಖಂಬಟ್ಟಾ, ಸುಶಾಂತ್ ಗೆಳತಿ, ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ನಿರ್ಮಾಪಕ ಮುಕೇಶ್ ಛಾಬ್ರಾಗೆ ಎನ್‍ಸಿಬಿ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಬಾಲಿವುಡ್ ಐವರು ಸೆಲೆಬ್ರಿಟಿಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ವಿಚಾರವನ್ನ ರಿಯಾ ಹೊರ ಹಾಕಿದ್ದರು. ರಿಯಾ ತನ್ನ ಹೇಳಿಕೆಯಲ್ಲಿ 25 ಕಲಾವಿದರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಶೇ.80ರಷ್ಟು ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಅನುಮಾನ ವ್ಯಕ್ತಪಡಿಸಿದೆ. 15 ಜನ ಬಿ ಟೌನ್ ಸ್ಟಾರ್ ಗಳು ಮತ್ತು ಉಳಿದವರು ಬಿ ಕೆಟಗರಿ ಕಲಾವಿದರು ಎನ್ನಲಾಗಿದೆ.

Sara Ali khan

ಡ್ರಗ್ಸ್ ಮತ್ತು ಸುಶಾಂತ್ ಸಿಂಗ್ ರಜಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈ ಮತ್ತು ಗೋವಾದ ಏಳು ಸ್ಥಳಗಳಲ್ಲಿ ಎನ್‍ಸಿಬಿ ದಾಳಿ ನಡೆಸಿದೆ. ಇತ್ತ ವಿಚಾರಣೆ ವೇಳೆ ಸುಶಾಂತ್ ಹಣದಿಂದಲೇ ಡ್ರಗ್ಸ್ ಖರೀದಿ ಮಾಡುತ್ತಿದ್ದೆ. ಆತನ ಎಲ್ಲ ವ್ಯವಹಾರಗಳನ್ನ ನೋಡಿಕೊಳ್ಳುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದಾರೆ. ಹಾಗೆ ಡ್ರಗ್ಸ್ ಯಾರು ತರಬೇಕು? ಎಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ರಿಯಾ ನಿರ್ಧಾರ ಮಾಡುತ್ತಿದ್ದರು ಎಂದು ಎನ್‍ಸಿಬಿ ನ್ಯಾಯಾಲಯದ ಮುಂದೆ ಹೇಳಿತ್ತು.

rakul preet singh

ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಭದ್ರತೆಯ ಕಾರಣಗಳಿಂದ ಜೈಲಿನಲ್ಲಿ ಪ್ರತ್ಯೇಕವಾಗಿ ಒಂದೇ ಕೋಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತಂಕಕಾರಿ ವಿಚಾರವೆಂದರೆ ಈಕೆ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತನಿಖೆಯಿಂದ ಈಗಾಗಲೇ ಗಮನಸೆಳೆದಿದ್ದು, ಈ ಹಿನ್ನೆಲೆಯಲ್ಲಿ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‍ಸ್ಟೇಬಲ್ ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ.

rakul preet

ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದೆ. ಆದರೆ ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಲ್ ನಲ್ಲಿ ಫ್ಯಾನ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೋರ್ಟ್ ಒಪ್ಪಿದರೆ ಟೇಬಲ್ ಫ್ಯಾನ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *