– ಡ್ರಗ್ ಜಿಹಾದ್, ಲವ್ ಜಿಹಾದ್ ಎರಡು ಒಂದೇ
ಮಂಡ್ಯ: ನಮ್ಮ ರಾಜ್ಯದಲ್ಲಿ 32 ಮಂದಿ ರಾಜಕಾರಣಿಗಳು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಬಗ್ಗೆ ನನಗೆ ಮಾಹಿತಿ ಇದೆ. ಸಂಪೂರ್ಣ ಮಾಹಿತಿ ಸಮೇತ ನಾನು ಇನ್ನೊಂದು ವಾರದಲ್ಲಿ ಆ ಲಿಸ್ಟ್ ನ್ನು ಹೋಂ ಮಿನಿಸ್ಟರ್ ಗೆ ಕೊಡುತ್ತೇನೆ. ನಾನು ಹಿಟ್ ಅಂಡ್ ರನ್ ಕೆಲಸ ಮಾಡಲ್ಲ. ಆಧಾರ ಸಹಿತವಾಗಿ ನಾನು ಬರುತ್ತೇನೆ. ನಟ ನಟಿಯರ ವಿಚಾರಕ್ಕಿಂತ ನಮಗೆ ನಮ್ಮ ಯುವ ಶಕ್ತಿ ಡ್ರಗ್ಸ್ ಕುರಿತು ಹಾಳಾಗಿ ಹೋಗುತ್ತಿರುವುದು ಆತಂಕ ಉಂಟು ಮಾಡಿದೆ. ಈ ಡ್ರಗ್ಸ್ ಮಾಫಿಯಾವನ್ನು ಬುಡ ಸಹಿತ ಕಿತ್ತು ಹಾಕುವಲ್ಲಿ ಬಿಜೆಪಿ ಧಮ್ ತೋರಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಈ ಡ್ರಗ್ಸ್ ದಂಧೆಯಲ್ಲಿ ಜಮೀರ್ ಇರುವುದು ನೂರಕ್ಕೆ ನೂರು ಸತ್ಯ. ಜಮೀರ್ ಗೆ ರಾಜಕೀಯವಾಗಿ ಶಕ್ತಿ ಇದೆ ಈ ಕಾರಣಕ್ಕೆ ಆತನನ್ನು ಪೊಲೀಸರು ಬಂಧನ ಮಾಡುತ್ತಿಲ್ಲ. ಜಮೀರ್ ಮಾತ್ರವಲ್ಲ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲೂ ಡ್ರಗ್ಸ್ ದಂಧೆಯಲ್ಲಿ ಇರುವ ರಾಜಕೀಯ ನಾಯಕರು ಇದ್ದಾರೆ. ರಾಜಕಾರಣಿಗಳದ್ದೇ ಹಲವಾರು ಪಬ್, ಕ್ಲಬ್, ಬಾರ್ ಗಳು ಇವೆ. ರಾಜಕಾರಣಿಗಳಿಗೆ ಸಾವಿರಾರು ಕೋಟಿ ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್ ನಿಂದ, ವೈನ್ ಲಾಬಿ ಹಾಗೂ ಡ್ರಗ್ಸ್ ಲಾಬಿ ಇಡೀ ರಾಜಕೀಯವನ್ನು ಹಿಡಿದುಕೊಂಡಿದೆ ಎಂದು ಆರೋಪಿಸಿದರು.
Advertisement
Advertisement
ಡ್ರಗ್ಸ್ ಮಾಫಿಯಾ ಹಾಗೂ ಲವ್ ಜಿಹಾದ್‍ಗೆ ಸಂಬಂಧ ಇದೆ. ಡ್ರಗ್ ಜಿಹಾದ್ ಮತ್ತು ಲವ್ ಜಿಹಾದ್ ಎರಡು ಒಂದೇ. ನಟಿ ಸಂಜನಾ ಗಂಡ ಡಾ.ಅಜೀಜ್ ಸಹ ಡ್ರಗ್ಸ್ ದಂಧೆಯಲ್ಲಿ ಇದ್ದಾನೆ. ಇದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದಾವೂದ್ ಇಬ್ರಾಹಿಂ ಈ ಎರಡಕ್ಕೂ ಮೂಲ ಪುರುಷನಾಗಿದ್ದಾನೆ. ಆಜೀಮಸ್ತಾನ ಎಂಬ ದೇಶ ದ್ರೋಹಿ ಇದ್ದ ಆತ ಈ ಡ್ರಗ್ಸ್ ದಂಧೆ ಮೂಲಕ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾನೆ ಎಂದರು.