ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಎದುರಿಸಿದ್ದ ಆ್ಯಂಕರ್ ಕಂ ನಟಿ ಅನುಶ್ರೀಗೆ ಕ್ಲೀನ್ ಚಿಟ್ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮೂಲಕ ಅನುಶ್ರೀ ಬಗ್ಗೆ ಸಾಕಷ್ಟು ಅರೋಪ ಇದ್ದರೂ ಪೊಲೀಸರು ಅಸಹಾಯಕರಾದ್ರಾ ಎಂಬ ಅನುಮಾನ ಮೂಡಿದೆ.
Advertisement
ಈ ಹಿಂದೆ ಅನುಶ್ರೀ ಮಾಜಿ ಮುಖ್ಯಮಂತ್ರಿ, ಮಗ ಹಾಗೂ ಕೆಲ ಪ್ರಭಾವಿ ರಾಜಕರಾಣಿಗಳ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಇದೀಗ ಅನುಶ್ರೀಗೆ ಕ್ಲೀನ್ ಚಿಟ್ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಇದೀಗ ಪ್ರಭಾವಿ ವ್ಯಕ್ತಿಗಳ ಪ್ರಭಾವ ವರ್ಕೌಟ ಆಯ್ತಾ?, ಒತ್ತಡದಿಂದ ಅನುಶ್ರೀ ಬಚಾವ್ ಆದ್ರಾ ಎಂಬ ಪ್ರಶ್ನೆ ಎದ್ದಿದೆ.
Advertisement
Advertisement
ಅನುಶ್ರೀಗೆ ಡ್ರಗ್ಸ್ ಟೆಸ್ಟ್ ಮಾಡಿಸಲು ಸಾಕಷ್ಟು ಆಧಾರ ಸಂಗ್ರಹ ಮಾಡಲಾಗಿತ್ತು. ಆದರೂ ಅನುಶ್ರೀಗೆ ಡ್ರಗ್ ಟೆಸ್ಟ್ ನಡಿಯೋದು ಡೌಟ್ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅನುಶ್ರೀ ಪ್ರಕರಣದಲ್ಲಿ ಸರ್ಕಾರದ ಮೇಲೆ ಪ್ರಭಾವಿಗಳ ಒತ್ತಡ ಹೆಚ್ಚಾಯ್ತಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ
Advertisement
ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅನುಶ್ರೀ ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿತ್ತು. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅನುಶ್ರೀ ಅವರಿಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ರಾಜ್ಯದ ಮೂವರು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ. ಮೂವರು ಪ್ರಭಾವಿಗಳಿಗೆ ಕರೆ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಅನುಶ್ರೀ ಪ್ರಕರಣದ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಿ- ಹೆಚ್‍ಡಿಕೆ ಗರಂ
ಪ್ರಭಾವಿಗಳ ಮೊಬೈಲ್ ಸಂಖ್ಯೆ ನೋಡಿ ಪೊಲೀಸರಿಗೆ ಶಾಕ್ ಆಗಿದ್ದಾರೆ. ಅನುಶ್ರೀ ಕರೆ ಮಾಡಿದ್ದ ‘ಆ’ ಮೂವರು ಸಾಮಾನ್ಯರಲ್ಲ, ಮೂರು ದೊಡ್ಡ ಪಕ್ಷಗಳ ನಾಯಕರು ಎನ್ನಲಾಗಿದ್ದು, ಒಬ್ಬರು ರಾಜ್ಯದ ಅತಿ ದೊಡ್ಡ ರಾಜಕಾರಣಿ, ಮತ್ತೊಬ್ಬರು ಕರಾವಳಿಯ ಅತಿ ಪ್ರಭಾವಿ ನಾಯಕರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿತ್ತು. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ