ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಕೇವಲ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂದು ಆನೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣದಲ್ಲಿ ಹೆಣ್ಣು ಮಕ್ಕಳು ಬಿಟ್ಟರೆ ಇನ್ನೂ ಯಾರೂ ಕೂಡ ಇಲ್ವಾ? ಬರಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರು ತಪ್ಪು ಮಾಡಿರಬಹುದು ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದರು.
Advertisement
Advertisement
ನಾನು ಕೂಡ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಡ್ರಗ್ಸ್ ತಡೆಯ ಬಗ್ಗೆ ಸಾಕಷ್ಟು ಪ್ರಿಯಾರಿಟಿ ಕೊಟ್ಟಿದ್ದೆ. ಡ್ರಗ್ಸ್ ಬರುತ್ತಿರುವ ಮೂಲವನ್ನು ಕಂಟ್ರೋಲ್ ಮಾಡಬೇಕಿದೆ. ಪೊಲೀಸರಿಗೂ ಕೂಡ ಸಾಕಷ್ಟು ಮಾಹಿತಿ ಇದೆ. ಡ್ರಗ್ಸ್ ಪ್ರಕರಣ ಯುವಜನಾಂಗವನ್ನು ಹಾಳುಮಾಡುತ್ತಿದೆ. ಮೂರು ಜನರನ್ನೇ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿದರೆ ಈ ಪ್ರಕರಣ ಹಳ್ಳ ಹಿಡಿಯಬಹುದು. ಉಳಿದವರ ಬಂಧನ ಯಾಕೆ ಆಗುತ್ತಿಲ್ಲ ಗೃಹ ಮಂತ್ರಿಗಳಿಗೆ ಮಾಹಿತಿ ಇಲ್ಲವಾ ಎಂದು ಪ್ರಶ್ನೆ ಮಾಡಿದರು.
Advertisement
Advertisement
ಇದೇ ವೇಳೆ ಆರ್.ಆರ್.ನಗರ ಚುನಾವಣಾ ಕೇಸ್ ವಿಚಾರವಾಗಿ ಮಾತನಾಡಿ, ಸಣ್ಣಪುಟ್ಟ ವಿಚಾರಕ್ಕೆ ಕೇಸು ದಾಖಲಿಸುವುದು ಸರಿಯಲ್ಲ. ಚಾಲಕನಿಗೆ ಗೊತ್ತಾಗದೆ 100 ಮೀಟರ್ ಒಳಗೆ ಹೋಗಿದ್ದಾರೆ. ಇನ್ನು ಮೇಲೆ ಬರಬಾರದು ಅಂತ ಪೊಲೀಸರು ಹೇಳಿದರೆ ಮುಗಿದುಹೋಗುತ್ತಿತ್ತು. ಅದನ್ನೇ ದೊಡ್ಡದಾಗಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಡಿಜೆ ಹಳ್ಳಿ ಕೆಜಿಹಳ್ಳಿ ಗಲಾಟೆ ವಿಚಾರ ಹೇಳಿಕೆ ನೀಡಿದ ರಾಮಲಿಂಗಾರೆಡ್ಡಿ, ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಗಲಾಟೆಗೆ ಕಾರಣ. ಸರ್ಕಾರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ತಪ್ಪು ಮಾಡಿದರೆ ಕ್ರಮಕೈಗೊಳ್ಳಲಿ. ನವೀನನನ್ನು ಕೂಡಲೇ ಬಂಧಿಸಿದರೆ ಈ ಗಲಾಟೆ ಆಗುತ್ತಿರಲಿಲ್ಲ. ಆರ್ ಆರ್ ನಗರ ಚುನಾವಣೆಗೆ ಒಂದು ವಾರ್ಡಿಗೆ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಕೂಡ ನೇಮಕ ಮಾಡಲಾಗಿದೆ. ಅವರು ಕೂಡ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದರು.