ಬೆಂಗಳೂರು: ಡ್ರಗ್ಸ್ ಎನ್ನುವುದು ದೇಹವನ್ನು ಮಾತ್ರವಲ್ಲ ದೇಶವನ್ನು ಕೂಡ ದುರ್ಬಲ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಸಂಬಂಧ ಟ್ವೀಟ್ ಮಾಡಿರುವ ಅವರು, ಡ್ರಗ್ಸ್ ಎನ್ನುವುದು ದೇಹವನ್ನು ಮಾತ್ರವಲ್ಲ ದೇಶವನ್ನು ಕೂಡ ದುರ್ಬಲ ಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ಡ್ರಗ್ಸ್ ದೇಹದಿಂದ ಮಾತ್ರವಲ್ಲ ದೇಶದಿಂದಲೂ ಎಷ್ಟು ದೂರ ಇಡಲು ಸಾಧ್ಯವೋ ಅಷ್ಟು ದೂರ ಇಡಲು ನಮ್ಮ ಪಕ್ಷದ ಕಾರ್ಯಕರ್ತರು ಯುವಜನಾಂಗದಲ್ಲಿ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.
ಡ್ರಗ್ಸ್ ಎನ್ನುವುದು ದೇಹವನ್ನು ಮಾತ್ರವಲ್ಲ ದೇಶವನ್ನು ಕೂಡ ದುರ್ಬಲ ಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ಡ್ರಗ್ಸ್ ದೇಹದಿಂದ ಮಾತ್ರವಲ್ಲ ದೇಶದಿಂದಲೂ ಎಷ್ಟು ದೂರ ಇಡಲು ಸಾಧ್ಯವೋ ಅಷ್ಟು ದೂರ ಇಡಲು ನಮ್ಮ ಪಕ್ಷದ ಕಾರ್ಯಕರ್ತರು ಯುವಜನಾಂಗದಲ್ಲಿ ಜಾಗೃತಿ ಮೂಡಿಸಬೇಕು.
1/2
— Nalinkumar Kateel (@nalinkateel) September 1, 2020
ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಕ್ತಿಮೀರಿ ಕೆಲಸ ಮಾಡುತ್ತಿವೆ. ನಮ್ಮ ಗೃಹಸಚಿವರು ಪೊಲೀಸ್ ಇಲಾಖೆಗೆ ಡ್ರಗ್ಸ್ ಜಾಲ ಮಟ್ಟ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ನಳಿನ್ ಬರೆದುಕೊಂಡಿದ್ದಾರೆ.
ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಕ್ತಿಮೀರಿ ಕೆಲಸ ಮಾಡುತ್ತಿವೆ. ನಮ್ಮ ಗೃಹಸಚಿವರು ಪೊಲೀಸ್ ಇಲಾಖೆಗೆ ಡ್ರಗ್ಸ್ ಜಾಲ ಮಟ್ಟ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.
2/2
— Nalinkumar Kateel (@nalinkateel) September 1, 2020
ಡ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂದು ನಟ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದು, ನನಗೆ ರಕ್ಷಣೆ ಕೊಟ್ಟರೆ ಹೆಸರು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದರು. ಅಂತೆಯೇ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದ್ರಜಿತ್ ತಮ್ಮ ಬಳಿ ಇದ್ದಂತಹ ಸಾಕ್ಷ್ಯಗಳನ್ನು ಸಿಸಿಬಿ ಕೈಗಿತ್ತಿದ್ದು, ತನಿಖೆ ನಡೆಯುತ್ತಿದೆ.