ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಂಜನಾ ಮನೆ ಮೇಲಿನ ದಾಳಿಗೆ ಮೂವರು ವ್ಯಕ್ತಿಗಳ ಜೊತೆಗಿನ ಒಡನಾಟ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ
ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ನಟಿ ಸಂಜನಾ ಆಪ್ತ ರಾಹುಲ್, ಪ್ರಶಾಂತ್ ರಾಂಕಾ ಕೊಟ್ಟ ಹೇಳಿಕೆಯ ಎಲ್ಲಾವನ್ನ ಇಟ್ಟುಕೊಂಡು ಸಿಸಿಬಿ ಸೋಮವಾರ ರಾತ್ರಿ ಸರ್ಚ್ ವಾರೆಂಟ್ ಪಡೆದಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ದಾಳಿ ಮಾಡಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?
Advertisement
ಸಂಜನಾ-ಪೃಥ್ವಿ ಶೆಟ್ಟಿ:
ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಸದ್ಯಕ್ಕೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
Advertisement
Advertisement
ಸಂಜನಾ-ರಾಹುಲ್ ಲಿಂಕ್:
ರಾಹುಲ್ ನಟಿ ಸಂಜನಾ ಗಲ್ರಾನಿ ಆಪ್ತನಾಗಿದ್ದು, ರಾಹುಲ್ನನ್ನು ರಾಕಿ ಬ್ರದರ್ ಎನ್ನುತ್ತಾರೆ. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದು, ರಾಹುಲ್ ಜೊತೆ ಶ್ರೀಲಂಕಾ ಕ್ಯಾಸಿನೋಗಳಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಜೊತೆಗೆ ರಾಹುಲ್ ಡ್ರಗ್ ಪೆಡ್ಲರ್ ಆಗಿದ್ದು, ಸೆಲೆಬ್ರಿಟಿ ಪಾರ್ಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಸಂಜನಾ ಹೆಸರು ಬಾಯಿಬಿಟ್ಟಿದ್ದನು. ಅಲ್ಲದೇ ರಾಹುಲ್ ಮೊಬೈಲ್ನಲ್ಲಿದ್ದ ಪಾರ್ಟಿ ಫೋಟೋ ಕೂಡ ಸೀಜ್ ಮಾಡಲಾಗಿದೆ.
Advertisement
ಸಂಜನಾ_ಪ್ರಶಾಂತ್ ರಾಂಕಾ ಲಿಂಕ್:
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ನಾಲ್ಕನೇಯ ಆರೋಪಿಯಾಗಿದ್ದು, ವಿದೇಶಿಯೊಂದಿಗೆ ಡ್ರಗ್ಸ್ ವ್ಯವಹಾರದಲ್ಲಿ ನೇರ ಸಂಪರ್ಕ ಹೊಂದಿದ್ದನು ಎಂದು ತಿಳಿದು ಬಂದಿದೆ. ಪ್ರಶಾಂತ್ ರಾಂಕಾ ಜೊತೆ ನಟಿ ಸಂಜನಾ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ಸಂಪರ್ಕ ಇದ್ದ ಬಗ್ಗೆ ಮೊಬೈಲ್ನಲ್ಲಿರುವ ಫೋಟೋ, ಕರೆ ಸಾಕ್ಷ್ಯ ಸುಳಿವು ನೀಡಿದೆ. ಈ ಸುಳಿವನ್ನು ಬೆನ್ನತ್ತಿದ ಸಿಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.
ನಟಿ ಸಂಜನಾಗೆ ನೋಟಿಸ್ ಕೊಟ್ಟರೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯನ್ನ ಇಟ್ಟುಕೊಂಡು ಸಿಸಿಬಿ ದಿಢೀರ್ ದಾಳಿ ಮಾಡಿದೆ.