ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ, ತನಿಖೆ ಮೇಲೆ ಪ್ರಭಾವ ಬೀರಿದ್ದರಾ ಎಂಬ ಪ್ರಶ್ನೆ ಎದ್ದಿದೆ?
ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅನುಶ್ರೀ ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಮಂಡ್ಯದ ನಿಮಿಷಾಂಬ ದೇಗುಲಕ್ಕೆ ಅನುಶ್ರೀ ಭೇಟಿ – ವಿಶೇಷ ಪೂಜೆ ಸಲ್ಲಿಕೆ
Advertisement
Advertisement
ಅನುಶ್ರೀ ಅವರಿಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ರಾಜ್ಯದ ಮೂವರು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ. ಮೂವರು ಪ್ರಭಾವಿಗಳಿಗೆ ಕರೆ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ.
Advertisement
ಪ್ರಭಾವಿಗಳ ಮೊಬೈಲ್ ಸಂಖ್ಯೆ ನೋಡಿ ಪೊಲೀಸರಿಗೆ ಶಾಕ್ ಆಗಿದ್ದಾರೆ. ಅನುಶ್ರೀ ಕರೆ ಮಾಡಿದ್ದ ‘ಆ’ ಮೂವರು ಸಾಮಾನ್ಯರಲ್ಲ, ಮೂರು ದೊಡ್ಡ ಪಕ್ಷಗಳ ನಾಯಕರು ಎನ್ನಲಾಗಿದ್ದು, ಒಬ್ಬರು ರಾಜ್ಯದ ಅತಿ ದೊಡ್ಡ ರಾಜಕಾರಣಿ, ಮತ್ತೊಬ್ಬರು ಕರಾವಳಿಯ ಅತಿ ಪ್ರಭಾವಿ ನಾಯಕರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಕಣ್ಣೀರಿಟ್ಟ ಅನುಶ್ರೀಗೆ ಧೈರ್ಯ ತುಂಬಿದ ಗೀತಾಭಾರತಿ ಭಟ್
Advertisement
ಪ್ರಕರಣದ ಕುರಿತು ಇಂದು ಸ್ಪಷ್ಟನೆ ನೀಡಿ ವಿಡಿಯೋ ಮಾಡಿದ್ದ ಅನುಶ್ರೀ, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ