ಹಾವೇರಿ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಸ್ ಓಡಿಸಿದ್ದಕ್ಕೆ ಹಾರ ಹಾಕಿರೋ ಚಾಲಕನ ಫೋಟೋಗೆ ಹಾಡು ಹಾಕಿ ಬೇಸರ ವ್ಯಕ್ತಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ನಗರದಿಂದ ಬಸಾಪುರ ಹಾಗೂ ಗುತ್ತಲಕ್ಕೆ ಚಾಲಕ ರಾಮಣ್ಣ ಕುಂಕುಮಗಾರ ಬಸ್ ಓಡಿಸಿದ್ದಾನೆ. ನಿನ್ನೆ ಸಂಜೆ ಡಿಪೋ ಬಳಿ ಬಂದಿದ್ದ ರಾಮಣ್ಣನನ್ನ ಕರೆದು ಹಿರಿಯ ಅಧಿಕಾರಿಗಳು ಡ್ಯೂಟಿಗೆ ಕಳುಸಿದ್ದರು. ಮುಷ್ಕರ ಬಿಟ್ಟು ಡ್ಯೂಟಿಗೆ ಹೋಗಿದ್ದಕ್ಕೆ, ‘ಮರಳಿ ಬಾರದ ಊರಿಗೆ…’ ಎಂಬ ಹಾಡು ಹಾಕಿ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ.
ಮುಷ್ಕರನಿರತ ಸಾರಿಗೆ ನೌಕರರು ಡ್ಯೂಟಿಗೆ ಹೋಗಿದ್ದ ಚಾಲಕನ ಫೋಟೋಗೆ ಶೋಕ ಗೀತೆ ಹಾಕಿ ವಿಡಿಯೋ ವೈರಲ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಹೇಳಿದ್ದಾರೆ.