ಲ್ಯಾಂಸಿಂಗ್: ಡ್ಯಾಂ ಒಡೆದು ನೀರು ಸೋರಿಕೆ ಆಗುತ್ತಿರುವ ದೃಶ್ಯಗಳನ್ನು ಪೈಲಟ್ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಡ್ಯಾಂ ಒಡೆದ ತಕ್ಷಣ ನೀರಿನ ರಭಸ ಹೇಗಿತ್ತು ಎಂಬುದನ್ನು ತೋರಿಸುತ್ತಿದೆ.
ಮಿಶಿಗನ್ ರಾಜ್ಯದಲ್ಲಿ ಟಿಟ್ಟಾಬವಾಸಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಎಡೆನ್ವಿಲ್ ಆಣೆಕಟ್ಟು ಪ್ರವಾಹದ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಬುಧವಾರ ಆಣೆಕಟ್ಟು ಒಡೆದಿದ್ದು, ಹಿಂದಿನ ದಿನ ಮಂಗಳವಾರ ಭಾರೀ ಮಳೆಯಾಗಿತ್ತು. ಎಡೆನ್ವಿಲ್ ಆಣೆಕಟ್ಟಿನಿಂದ ಅಪಾರ ಪ್ರಮಾಣದ ನೀರು ಹರಿದ ಪರಿಣಾಮ ಸ್ಯಾಂಡೋರ್ಡ್ ಡ್ಯಾಂ ತುಂಬಿ ಹರಿದಿದೆ. ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಮಿಡ್ ಲ್ಯಾಂಡ್ ಪ್ರದೇಶದ ಜನರನ್ನು ಬುಧವಾರ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
Advertisement
Advertisement
ಪುಟ್ಟ ಪ್ಲೇನ್ ನಲ್ಲಿ ಹೋಗ್ತಿದ್ದ ಪೈಲಟ್ ರಿಯಾನ್ ಕಾಲೆಟೋ ಎಡೆನ್ವಿಲ್ ಡ್ಯಾಂನಿಂದ ನೀರು ಹರಿಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದ್ದಾರೆ. ಈ ವಿಡಿಯೋ ರಿಯಾನ್ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 19 ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.