ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್‍ಗೆ ಕೊರೊನಾ ಪಾಟಿಸಿವ್ ದೃಢ

Public TV
2 Min Read
Trump

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್‍ಗೆ ಸಂಕಷ್ಟ ಎದುರಾಗಿದ್ದು, ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ಟ್ರಂಪ್ ಸಲಹ ತಂಡದ ಹೋಪ್ ಹಿಕ್ಸ್ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಈ ವಿಚಾರವನ್ನು ಸ್ವತಃ ಟ್ರಂಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನಾನು ಮತ್ತು ಮೆಲಾನಿಯಾ ಕೋವಿಡ್ ಸೋಂಕಿಗೆ ತುತ್ತಾಗಿದ್ದೇವೆ. ನಾವು ಈಗಾಗಲೇ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇವೆ. ಒಟ್ಟಾಗಿ ನಾವು ಸೋಂಕನ್ನು ಎದುರಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಟ್ರಂಪ್ ಮಂಗಳವಾರ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಪ್ ಹಿಕ್ಸ್ ಅವರೊಂದಿಗೆ ಪ್ರಯಾಣಿಸಿದ್ದರು. ಈ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದ ಟ್ರಂಪ್, ಹೋಪ್ ಹಿಕ್ಸ್ ಶ್ರಮ ಜೀವಿ. ಆಕೆ ಮಾಸ್ ಧರಿಸುತ್ತಿದ್ದರು ಕೊರೊನಾ ಪಾಟಿಸಿವ್ ಬಂದಿದೆ. ನಾವು ಅವರೊಂದಿಗೆ ಹೆಚ್ಚಿನ ಸಮಯ ಕಳೆದ ಕಾರಣ ಪರೀಕ್ಷೆ ಮಾಡಿಸಿದ್ದೇವು ಎಂದು ಹೇಳಿದ್ದಾರೆ.

ಚುನಾವಣೆ ಹತ್ತಿರವಾದ ಸಂದರ್ಭದಲ್ಲೇ ಕೊರೊನಾ ದೃಢವಾಡ ಹಿನ್ನೆಲೆಯಲ್ಲಿ ಟ್ರಂಪ್ ಅನಿವಾರ್ಯವಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿಯಬೇಕಿದೆ. ಈ ಹಿಂದೆ ಕೊರೊನಾ ವ್ಯಾಕ್ಸಿನ್ ಕುರಿತು ಮಾತನಾಡಿದ್ದ ಟ್ರಂಪ್, ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ವ್ಯಾಕ್ಸಿನ್ ಲಭ್ಯವಾಗಲಿದೆ. ಅದಕ್ಕೆ ಬೇಕಾಗಿರುವ ಹಣವನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದರು. ಆದರೆ ಸದ್ಯ ಚುನಾವನೆಯ ವೇಳೆಗೆ ವ್ಯಾಕ್ಸಿನ್ ಲಭಿಸುವುದು ಅನುಮಾನ ಎನ್ನಲಾಗಿದೆ.

TRUMP 1

ಈ ಹಿಂದೆ ಮಾರ್ಚ್‍ನಲ್ಲಿ ಟ್ರಂಪ್ ದಂಪತಿಗೆ ಮೊದಲ ಬಾರಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಟ್ರಂಪ್ ದಂಪತಿ ಬ್ರೆಜಿಲ್ ಅಧ್ಯಕ್ಷರ ಜೈರ್ ಬೋಲ್ಸನಾರೊ ಅವರನ್ನು ಭೇಟಿ ಮಾಡಿದ 2 ದಿನಗಳ ಬಳಿಕ ಜೈರ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಆದರೆ ಆ ವೇಳೆ ಅವರಿಗೆ ನೆಗೆಟಿವ್ ವರದಿ ಬಂದಿತ್ತು. ಆ ಬಳಿಕ ಏಪ್ರಿಲ್‍ನಲ್ಲಿ 2ನೇ ಬಾರಿ ಟ್ರಂಪ್‍ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.

covid 19

Share This Article