ಡೇಟಿಂಗ್ ಆ್ಯಪ್ ಹುಡ್ಗನ ಜೊತೆ ಡೇಟ್‍ಗೆ ಹೋಗಿದ್ದು ತಪ್ಪಾಯ್ತು!

Public TV
2 Min Read
Dating App

– ಊಟ, ಡ್ರಿಂಕ್ ಬಳಿಕ ಕಾರಿನಲ್ಲಿ ನಡೆದಿದ್ದು ಘನಘೋರ
– ಇನ್‍ಸ್ಟಾದಲ್ಲಿ ಭಯಾನಕ ಕಥೆ ಬಿಚ್ಚಿಟ್ಟ ಯುವತಿ

ಅಟ್ಲಾಂಟಾ: ಡೇಟಿಂಗ್ ಆ್ಯಪ್ ಹುಡುಗನ ಜೊತೆ ಡೇಟ್ ಗೆ ಹೋಗಿದ್ದ ಯುವತಿ ಆಸ್ಪತ್ರೆ ಸೇರಿರುವ ಘಟನೆ ಜಾರ್ಜಿಯಾ ದೇಶದ ಅಟ್ಲಾಂಟಾ ನಗರದಲ್ಲಿ ನಡೆದಿದೆ. ಯುವತಿಯನ್ನ ಡೇಟ್ ಗೆ ಕರೆದೊಯ್ದ ಯುವಕ ಹೊರಡುವಾಗ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ.

Dating App 1

ಬ್ರಿಟನಿ ಕೊರೆರಿ ಹಲ್ಲೆಗೊಳಗಾದ ಯುವತಿ. ಎರಡು ದಿನಗಳ ಹಿಂದೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಬೆನ್ ಎಂಬಾತನ ಜೊತೆ ಡೇಟ್ ಗೆ ಹೋಗಿದ್ದಳು. ಬೆನ್ ಸಹ ತನ್ನ ವೈಟ್ ಕಲರ್ ಕಾರ್ ತಂದು ಬ್ರಟನಿಯನ್ನ ಪಿಕ್ ಮಾಡಿ, ಹೈಡ್ ಲಾಂಜ್ ಗೆ ಕರೆದುಕೊಂಡು ಹೋಗಿದ್ದನು. ಇಬ್ಬರು ಜೊತೆಯಾಗಿಯೇ ಕುಡಿದು ಊಟ ಮಾಡಿದ್ದಾರೆ. ಊಟದ ಬಳಿಕ ಬ್ರಟನಿ ಮನೆಗೆ ಹೋಗೋದಾಗಿ ಹೇಳಿದ್ದಾಳೆ.

Dating App 3

ಮನೆಗೆ ಹೋಗಲು ಸಿದ್ಧವಾಗಿದ್ದ ಬ್ರಿಟನಿಗೆ ತಾನೇ ಬಿಡೋದಾಗಿ ಹೇಳಿ ಕಾರ್ ಪಾರ್ಕಿಂಗ್ ಬಳಿ ಕರೆ ತಂದಿದ್ದಾನೆ. ಬ್ರಿಟನಿ ಕಾರ್ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ವ್ಯಾಘ್ರನಾದ ಬೆನ್, ಯುವತಿಯ ಮುಖ, ಹಣೆ ಮೇಲೆ ಹಲ್ಲೆ ನಡೆಸಿದ್ದಾನೆ. ಗನ್ ತೋರಿಸಿ ಕೊಲ್ಲುವದಾಗಿಯೂ ಬೆದರಿಕೆ ಹಾಕಿದ್ದಾನೆ. ಹಲ್ಲೆ ವೇಳೆ ಬೆನ್, ನಿನಗಾಗಿ ಮಾಡಿದ ಖರ್ಚಿಗೆ ನೀನು ಯೋಗ್ಯಳಲ್ಲ ಅಂತ ಹೇಳುತ್ತಾ ಹೊಡೆಯುತ್ತಿದ್ದ ಎಂದು ಬ್ರಿಟನಿ ಹೇಳಿದ್ದಾಳೆ.

Dating App 4..JPG

ಬ್ರಿಟನಿ ಕೂಗಾಟ ಕೇಳಿದ ಪಾರ್ಕಿಂಗ್ ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಸಹಾಯಕ್ಕೆ ಧಾವಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಗಳನ್ನು ಕಂಡ ಬೆನ್, ಯುವತಿಯನ್ನ ಕೆಳಗೆ ಇಳಿಸಿ ಪರಾರಿಯಾಗಿದ್ದಾನೆ. ನಂತರ ಗಾಯಗೊಂಡಿದ್ದ ಬ್ರಿಟನಿಯನ್ನ ಭದ್ರತಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯ- ಟೆಕ್ಕಿಯನ್ನು ಮನೆಗೆ ಕರೆದು 5 ಲಕ್ಷ ಕೊಡು ಅಂದ್ಳು!

 

View this post on Instagram

 

A post shared by @brittanycorreri

ಇನ್‍ಸ್ಟಾದಲ್ಲಿ ಡೇಟಿಂಗ್ ಅನುಭವ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬ್ರಿಟನಿ, ತಮ್ಮ ಡೇಟಿಂಗ್ ಅನುಭವವನ್ನು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾಳೆ. ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗುವ ಹುಡುಗರ ಜೊತೆ ಹೊರ ಹೋಗುವ ಮುನ್ನ ಯುವತಿಯರು ಎಚ್ಚರಿಕೆಯಿಂದಿರಬೇಕು. ನಿಮಗೆ ಆ ವ್ಯಕ್ತಿ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇರಲ್ಲ ಎಂದು ಬ್ರಿಟನಿ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್‍ಗೆ 19ರ ಯುವಕನಿಂದ ಆಂಟಿಯ ನಂಬರ್ ಅಪ್ಲೋಡ್

Share This Article
Leave a Comment

Leave a Reply

Your email address will not be published. Required fields are marked *