ಅಬುಧಾಬಿ: ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ವಾರ್ನರ್ ಪಡೆ ಉತ್ತಮ ಆರಂಭ ಕಂಡರು ಡೆಲ್ಲಿಗೆ ದೊಡ್ಡ ಟಾರ್ಗೆಟ್ ನೀಡುವಲ್ಲಿ ವಿಫಲವಾಗಿದೆ.
ಇಂದು ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 11ನೇ ಮ್ಯಾಚಿನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ದೆಹಲಿ ಕ್ಯಾಪಿಟಲ್ ತಂಡಕ್ಕೆ 163 ರನ್‍ಗಳ ಸಾಧಾರಣ ಟಾರ್ಗೆಟ್ ನೀಡಿದೆ. ಹೈದರಾಬಾದ್ ತಂಡ ಆರಂಭದಲ್ಲಿ ಉತ್ತಮ ಲಯದಲ್ಲಿದ್ದರೂ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಯ್ತು. ಡೆಲ್ಲಿ ಪರ ಅಮಿತ್ ಮಿಶ್ರಾ ಮತ್ತು ಕಗಿಸೊ ರಬಡಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
Advertisement
#IPL2020 match 11: Sunrisers Hyderabad score 162 runs against Delhi Capitals at the loss of 4 wickets at Sheikh Zayed Cricket Stadium in Abu Dhabi, UAE. (Photo credit – IPL) pic.twitter.com/oRWVFAvx1A
— ANI (@ANI) September 29, 2020
Advertisement
ಮೊದಲಿನಿಂದಲೇ ಹೈದರಾಬಾದ್ ಮಂದಗತಿಯ ಬ್ಯಾಟಿಂಗ್ ಮಾಡಿತು. ಡೆಲ್ಲಿ ಬೌಲರ್ ಗಳ ಬಿಗಿ ಬೌಲಿಂಗ್ ದಾಳಿಗೆ ಮಂಕಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 38 ರನ್ ಗಳಿಸಿದರು. ನಿಧಾನವಾಗಿಯೇ ತಂಡಕ್ಕೆ ರನ್ ಕಲೆಹಾಕುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು 33 ಎಸೆತಗಳಲ್ಲಿ 45 ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ವಿಕೆಟ್ ನೀಡಿದರು.
Advertisement
Rabada with the wicket of Jonny Bairstow and #SRH lose their third.
Live – https://t.co/doLGBBvnIY #Dream11IPL #DCvSRH pic.twitter.com/rxCFwdTY3n
— IndianPremierLeague (@IPL) September 29, 2020
Advertisement
ಇದಾದ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮನೀಶ್ ಪಾಂಡೆ ಕೇವಲ ಮೂರು ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ಎರಡನೇ ಬಲಿಯಾಗಿ ಪೆವಿಲಿಯನ್ ಸೇರಿದರು. ನಂತರ ಒಂದಾದ ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್‍ಸ್ಟೋವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಇದೇ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿದ ಜಾನಿ ಬೈರ್ ಸ್ಟೋವ್ ಅವರು 45 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ವೇಳೆ ಕೇನ್ ಮತ್ತು ಜಾನಿ ಜೋಡಿ 36 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು.
FIFTY!
A fighting half-century for @jbairstow21. His 4th in IPL.
Live – https://t.co/doLGBBdMRq #Dream11IPL #DCvSRH pic.twitter.com/A1mpqjWrLS
— IndianPremierLeague (@IPL) September 29, 2020
ನಂತರ ಅರ್ಧಶತಕ ಸಿಡಿಸಿದ ಜಾನಿ ಬೈರ್ ಸ್ಟೋವ್ 53 ರನ್ ಗಳಿಸಿ ಕಗಿಸೊ ರಬಡಾ ಅವರಿಗೆ ಔಟ್ ಆಗಿ ಹೊರನಡೆದರು. ನಂತರ ಜೊತೆಯಾದ ಅಬ್ದುಲ್ ಸಮದ್ ಮತ್ತು ಕೇನ್ ವಿಲಿಯಮ್ಸನ್ ಅವರು ಕೊನೆಯ ಎರಡು ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಕಗಿಸೊ ರಬಡಾ ಅವರ ಕೊನೆಯ ಓವರಿನಲ್ಲಿ 41 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಔಟ್ ಆದರು.