ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಇತ್ತೀಚಿನ ಅಧ್ಯಯನ ತಿಳಿಸಿದೆ.
Advertisement
ಕೊವ್ಯಾಕ್ಸಿನ್ ಲಸಿಕೆಯನ್ನು ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ವೈರಸ್ ವಿರುದ್ಧ ಶೇ.77.8ರಷ್ಟು ಮತ್ತು ಡೆಲ್ಟಾ ವೈರಾಣು ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು. ಆದರೆ ಕೊವೀಡ್-19 ರೂಪಾಂತರಿ ತಳಿಯಾದ, ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡೆಲ್ಟಾ ಪ್ಲಸ್ ವೈರಾಣು ವಿರುದ್ಧವೂ ಇದು ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಐಸಿಎಂಆರ್ ನ ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ. ಇದನ್ನೂ ಓದಿ: ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ
Advertisement
Advertisement
ಕೊವ್ಯಾಕ್ಸಿನ್ ಮೂರು ಹಂತದ ಕ್ಲಿನಿಕಲ್ ಪ್ರಯೋಗ ಆಗದಿದ್ದರೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಸಂಸ್ಥೆ, ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಘೋಷಿಸಿತ್ತು. ಅದರ ಅನ್ವಯ ಈ ಲಸಿಕೆ ಲಕ್ಷಣ ಸಹಿತ ಕೊವೀಡ್-19 ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಇದೀಗ ಡೆಲ್ಟಾ ಪ್ಲಸ್ ವಿರುದ್ಧವು ಪರಿಣಾಮಕಾರಿ ಎಂದು ವರದಿಯಾಗಿದೆ.
Advertisement