ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ರಕರಣಗಳು ಮಹಾ ಸ್ಫೋಟ ಆಗುತ್ತಿರುವ ಹೊತ್ತಲ್ಲೇ ಬಿಬಿಎಂ ಕಮಿಷನರ್ ಗೌರವ್ ಗುಪ್ತಾ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಡೆಲ್ಟಾ ವೇರಿಯಂಟ್ ವೈರಾಣು ತಳಿ, 10 ಕೇಸ್ ಗಳು ದೃಢವಾದ್ರೆ, ಅದ್ರಲ್ಲಿ 6-7 ಕೇಸ್ ಗಳು ಡೆಲ್ಟಾ ಕೇಸ್ ಗಳು ಪತ್ತೆಯಾಗುತ್ತಿವೆ. ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದರ ಹಬ್ಬುವಿಕೆಯೇ ಕಾರಣ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಡೆಲ್ಟಾ ವೆರಿಯಂಟ್ ಕೇಸ್ ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರತಿನಿತ್ಯದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ವೈರಸ್‍ನ ಪ್ರಕರಣಗಳು ಪತ್ತೆಯಾಗುತ್ತಿವೆ. ಡೆಲ್ಟಾ ವೇರಿಯಂಟ್‍ನ ಮತ್ತೊಂದು ರೂಪವೇ ಡೆಲ್ಟಾ ಪ್ಲಸ್. ಜನರ ಕೈಯಲ್ಲಿಯೇ ಎಲ್ಲವೂ. ಜನರ ಸುರಕ್ಷತೆ ಮುಖ್ಯ. ಜನ ಗಾಬರಿ ಪಡುವಂತಹ ಅವಶ್ಯಕತೆಯಿಲ್ಲ ಎಂದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ
Advertisement
Advertisement
ಬೆಂಗಳೂರಿನಲ್ಲಿ ಒಟ್ಟು 525 ಡೆಲ್ಟಾ ವೆರಿಯಂಟ್ ಪ್ರಕರಣಗಳು ಪತ್ತೆಯಾಗಿದ್ದು, ಸ್ಯಾಂಪಲ್ಸ್ ನ್ನು ನಿಮಾನ್ಸ್ ಹಾಗೂ ಎನ್‍ಸಿಬಿಎಸ್‍ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರು ಆದಷ್ಟು ಸುರಕ್ಷತೆಯಿಂದ ಇರಬೇಕೆಂದು ಸಲಹೆ ನೀಡಿದರು.
Advertisement