ಡಿಸಿಎಂ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ: ಲಕ್ಷ್ಮಣ್ ಸವದಿ

Public TV
2 Min Read
Laxman Savadi 1

ಬೆಂಗಳೂರು: ಡಿಸಿಎಂ ಮಗನ ಕಾರ್ ಅಪಘಾತಕ್ಕೊಳಗಾಗಿದೆ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಪುತ್ರ ಚಿದಾನಂದ್ ಮತ್ತು ಆತನ ಸ್ನೇಹಿತರು ಅಂಜನಾದ್ರಿ ಬೆಟ್ಟದಿಂದ ಹಿಂದಿರುಗುವ ವೇಳೆ ಅಪಘಾತ ನಡೆದಿದೆ. ಚಿದಾನಂದ್ ಫಾರ್ಚೂನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ರು. ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರ್ ನಲ್ಲಿ ಗೆಳೆಯರು ಬರುತ್ತಿದ್ರು. ಗೆಳೆಯರಿದ್ದ ಕಾರ್ ಅಪಘಾತವಾಗಿದೆ. ಆಕ್ಸಿಡೆಂಟ್ ಆಗ್ತಿದ್ದಂತೆ ಗೆಳೆಯರು ಫೋನ್ ಮಾಡಿದ್ದರಿಂದ ಚಿದಾನಂದ್ ವಾಪಸ್ಸು ಹೋಗಿದ್ದಾನೆ. ಅವನೇ ಅಂಬ್ಯುಲೆನ್ಸ್ ಗೆ ಫೋನ್ ಮಾಡಿ ಆಸ್ಪತ್ರೆ ಸೇರಿಸಿ ಮನೆಗೆ ಹೋಗಿದ್ದಾನೆ. ರಾತ್ರಿ ಬೈಕ್ ಸವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದರು.

Laxman Savadi 2 medium

ರಾತ್ರಿ ಸಾವು ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣಮಂತು ನಮ್ಮ ಖಾಯಂ ಡ್ರೈವರ್. ಮಗನ ಕಾರ್ ನಮ್ಮ ಚಾಲಕನೇ ಚಲಾಯಿಸುತ್ತಿದ್ದನು. ಡಿಸಿಎಂ ಮಗ ಅಥವಾ ವಿನಿಸ್ಟರ್ ಪುತ್ರ ಅಂದಾಗ ಈ ರೀತಿ ಊಹಾಪೋಹಗಳೆಲ್ಲ ಸಹಜ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನು ಉಪ ಮುಖ್ಯಮಂತ್ರಿಗಳು ತಳ್ಳಿ ಹಾಕಿದರು.

Laxam Savadi Son Chidanand Car Accident 6 medium

ಮನೆಯ ಹಿರಿಯನನ್ನು ಆ ಕುಟುಂಬ ಕಳೆದುಕೊಂಡಿದೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪರಿಹಾರ ಕೊಡುವುದು ನಮ್ಮ ಧರ್ಮ. ಫೋನ್ ನಲ್ಲಿ ಮಾತನಾಡೋದು ಸೂಕ್ತವಲ್ಲ. ನಾನೇ ಖುದ್ದಾಗಿ ಗ್ರಾಮಕ್ಕೆ ತೆರಳಿ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತೇನೆ ಅಂದ್ರು. ಇದನ್ನೂ ಓದಿ: ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು

Laxam Savadi Son Chidanand Car Accident 2 medium

ಏನಿದು ಪ್ರಕರಣ?:
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ. ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕಾರ್ ಡಿಕ್ಕಿಯಾಗುತ್ತಿದ್ದಂತೆ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೂಡ್ಲೆಪ್ಪ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

Laxman Savadi Son 3 medium

ಆರೋಪಗಳೆಲ್ಲ ಸುಳ್ಳು:
ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಯಾರ ಕೊರಳ ಪಟ್ಟಿಯನ್ನು ನಾವು ಹಿಡಿದಿಲ್ಲ. ಯಾರಿಗೂ ಅವಾಜ್ ಹಾಕಿಲ್ಲ. ಕುಟುಂಬಸ್ಥರ ನಂಬರ್ ಇರಲಿಲ್ಲ ಹಾಗಾಗಿ ಯಾರನ್ನೂ ಸಂಪರ್ಕಿಸಿಲ್ಲ. ಆದ್ರೆ ಕೂಡಲೇ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಸದ್ಯ ಅಥಣಿಯಲ್ಲಿದ್ದಾನೆ. ಪೊಲೀಸರ ಮುಂದೆ ಹಾಜರಾಗ್ತಾನೆ. ದೇವರಾಣೆ, ನನ್ನ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳು ಶುದ್ಧ ಸುಳ್ಳು.

Share This Article
Leave a Comment

Leave a Reply

Your email address will not be published. Required fields are marked *