– ಗಂಡನ ಪ್ರೀತಿಗೆ ಹೆಂಡತಿಯ ಬೆಂಬಲ
ಭೋಪಾಲ್: 3 ವರ್ಷಗಳ ದಾಂಪತ್ಯ ಜೀವನ ನಂತರ ಗಂಡನಿಗೆ ಡಿವೋರ್ಸ್ ಕೊಟ್ಟು ಆತನ ಗರ್ಲ್ಫ್ರೆಂಡ್ ಜೊತೆಗೆ ಪತ್ನಿ ಮದುವೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಸಿನಿಮಿಯ ಕಥೆಯನ್ನು ನೆನಪಿಸುವ ಈ ಸ್ಟೋರಿ ಕೇಳುವವರಿಗೆ ಅಚ್ಚರಿ ಎನಿಸಬಹುದು. ಭೋಪಾಲ್ನ ವ್ಯಕ್ತಿಯೊಬ್ಬರು ಮೂರು ವರ್ಷಗಳಿಂದ ಮಹಿಳೆಯೊಬ್ಬರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದರು. ಆದರೆ ಇವರು ತನ್ನ ಗರ್ಲ್ಫ್ರೆಂಡ್ ಜೊತೆಗೂ ಮದುವೆಯಾಗಿ ಇಬ್ಬರೊಂದಿಗೂ ಸಂಸಾರ ನಡೆಸಬೇಕು ಎಂದುಕೊಂಡಿದ್ದನು. ಆದರೆ ಇದಕ್ಕೆ ಕಾನೂನು ಒಪ್ಪುವುದಿಲ್ಲ. ಹಾಗಾಗಿ ಮಹಿಳೆ ತಾನೇ ಪತಿಗೆ ವಿಚ್ಛೇದನ ನೀಡಿ ಗರ್ಲ್ಫ್ರೆಂಡ್ ಜೊತೆಗೆ ಮದುವೆಯಾಗಲು ಬೆಂಬಲ ನೀಡಿದ್ದಾರೆ. ಗಂಡನ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಚ್ಛೇದನ ಕೊಡಿಸಿರುವ ಲಾಯರ್ ಹೇಳಿದ್ದಾರೆ.
ಈ ವ್ಯಕ್ತಿಗೆ ಮೊದಲೇ ಗರ್ಲ್ಫ್ರೆಂಡ್ ಇದ್ದರೆ ಇನ್ನೊಬ್ಬ ಮಹಿಳೆಯನ್ನು ಏಕೆ ಮದುವೆಯಾದನು? ಗರ್ಲ್ಫ್ರೆಂಡ್ ಕೂಡ ಶೀಘ್ರದಲ್ಲೇ ಇವನನ್ನು ಹೊರಹಾಕಬೇಕು. ಈ ಮಹಿಳೆಗೆ ಕಾಳಜಿಯುಳ್ಳ ಮತ್ತು ನಿಷ್ಠಾವಂತ ಪ್ರೀತಿಯ ಹೊಸ ಗಂಡ ಸಿಗಲಿ ಎಂದು ಟ್ವಿಟ್ಟರ್ ನಲ್ಲಿ ನೆಟ್ಟಿಗರು ಮಹಿಳೆಯ ತ್ಯಾಗವನ್ನ ಕೊಂಡಾಡಿದ್ದಾರೆ.