ಮಡಿಕೇರಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಈ ವಿಚಾರ ಖುಷಿ ತಂದಿದೆ. ಮತ್ತೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಡಿವೈಎಸ್‍ಪಿ ಗಣಪತಿ ತಂದೆ ಕುಶಾಲಪ್ಪ ಹಾಗೂ ಗಣಪತಿ ಸಹೋದರ ಮಚ್ಚಯ್ಯ ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿ ಮಾತಾನಾಡಿದ ಅವರು, ಗಣಪತಿ ಅವರು ಮರಣ ಹೊಂದಿದ ನಂತರ ನ್ಯಾಯಕ್ಕಾಗಿ ಗಣಪತಿ ಕುಟುಂಬಸ್ಥರು ಹೋರಾಟ ನಡೆಸಿದ್ದೆವು. ಇದರ ಫಲವಾಗಿ ಇದೀಗ ಸಿಬಿಐ ತಂಡ ಮತ್ತೆ ತನಿಖೆ ಅರಂಭ ಮಾಡಿದೆ. ಮತ್ತೆ ನಮಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ನ್ಯಾಯ ಸಿಗೋವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
Advertisement
Advertisement
ಇಂದು ವಿಧಾನಸೌಧಕ್ಕೆ ಹೋಗಿ ಕೆ.ಜೆ.ಜಾರ್ಜ್ ಅವರಿಗೆ ನೋಟಿಸ್ ನೀಡಿದ್ದಾರೆ. ನ್ಯಾಯ ಹಾಗೂ ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಗಣಪತಿ ತಮ್ಮ ಮಾಚಯ್ಯ ಮತ್ತು ತಂದೆ ಕುಶಾಲಪ್ಪ ತಿಳಿಸಿದರು.
Advertisement
ಮರು ತನಿಖೆ ಯಾಕೆ?
2016ರ ಜು.17ರಂದು ನಡೆದಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಬಿಐ ನ್ಯಾಯಲಾಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಆದರೆ ಆತ್ಮಹತ್ಯೆಗೆ ಕಾರಣವೆಂದು ಹಲವರ ಮೇಲೆ ಮಾಡಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್‍ನ್ನು ನ್ಯಾಯಾಲಯ ತಿರಸ್ಕರಿಸಿ, ಮರು ತನಿಖೆಗೆ ಆದೇಶಿಸಿತ್ತು. ಹೀಗಾಗಿ ಪ್ರಕರಣಕ್ಕೆ ಮರುಜೀವ ಬಂದಿದೆ. ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿರುವುದನ್ನು ಗಣಪತಿ ಅವರ ಪುತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ಆರೋಪಿಗಳಾದ ಕೆ.ಜೆ.ಜಾರ್ಜ್, ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್‍ಗೆ ಸೆ.28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
Advertisement
ಏನಿದು ಪ್ರಕರಣ?
2016ರ ಜುಲೈ 7 ರಂದು ಬೆಳಗ್ಗೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಗಣಪತಿ ಅವರು ರೂಮು ಪಡೆದುಕೊಂಡಿದ್ದರು. ಸಾವಿಗೂ ಮುನ್ನ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಗಣಪತಿ, ಸಚಿವ ಕೆ. ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ನಂತರ ಲಾಡ್ಜ್ ನಲ್ಲಿ ಪೊಲೀಸ್ ಯೂನಿಫಾಂನಲ್ಲಿಯೇ ನೇತಾಡುತ್ತಿದ್ದ ಅವರ ದೇಹ ಪತ್ತೆಯಾಗಿತ್ತು.