– ಹೈಕಮಾಂಡ್ಗೆ ಪತ್ರ ಬರೆಯಲು ಮುಂದಾದ ಬಿಜೆಪಿ ನಿಷ್ಠರು
ಬೆಂಗಳೂರು: ಈಶ್ವರಪ್ಪ, ಯಡಿಯೂರಪ್ಪ ಮಧ್ಯೆ ಗುದ್ದಾಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಎಂ ವಿರುದ್ಧ ತಿರುಗಿ ಬಿದ್ದ ಈಶ್ವರಪ್ಪ ನಡೆಗೆ ಸ್ವಪಕ್ಷೀಯರ ಆಕ್ರೋಶಗೊಂಡಿದ್ದು ಹೈಕಮಾಂಡ್ ಬಾಗಿಲು ತಟ್ಟಲು ಮುಂದಾಗಿದ್ದಾರೆ.
ಒಬ್ಬೊಬ್ಬರು ಒಂದೊಂದು ನಿರ್ಧಾರ ಕೈಗೊಳ್ಳುತ್ತಿದ್ದು, ಯಾರನ್ನಾದರೂ ಸರಿಪಡಿಸಿ, ಒಟ್ಟಿನಲ್ಲಿ ಪಾರ್ಟಿ ಉಳಿಸಿ.ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ಹೈಕಮಾಂಡ್‍ಗೆ ಪತ್ರ ಬರೆದು ದೂರು ನೀಡಲು ಬಿಜೆಪಿ ನಿಷ್ಠರು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರ ಪಟ್ಟು
ದೂರಿನಲ್ಲಿ ಏನಿದೆ?
ಉಪ ಚುನಾವಣೆಯ ಸಂದರ್ಭದಲ್ಲಿ ಈ ಒಳಜಗಳ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರ ತರುತ್ತಿದೆ. ಜನರ ದೃಷ್ಟಿಯಲ್ಲಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲದಾಂತಗುತ್ತದೆ. ಮೊದಲೇ ಯತ್ನಾಳ್‍ರ ಹೇಳಿಕೆಗಳು ಮುಜುಗರ ತರುತ್ತಿವೆ.
ಹಿರಿಯರಾದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡುವ ಅಗತ್ಯ ಇರಲಿಲ್ಲ. ಇದರಿಂದ ಪಕ್ಷ, ಸರ್ಕಾರ ಗೌರವ, ಘನತೆಗೆ ಹಾನಿಯಾಗುತ್ತಿದೆ. ಪಕ್ಷದ ವೇದಿಕೆಯಲ್ಲೇ ಈಶ್ವರಪ್ಪ ಚರ್ಚೆ ನಡೆಸಬಹುದಿತ್ತು. ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಇದೆಲ್ಲ ಹಿನ್ನೆಡೆಯಾಗಬಹುದು. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸಿ ಭಿನ್ನಾಭಿಪ್ರಾಯವನ್ನು ಇತ್ಯರ್ಥ ಮಾಡಬೇಕು ಎಂದು ಮನವಿ ಮಾಡಲು ಮುಂದಾಗಿದ್ದಾರೆ.