ಶ್ರೀನಗರ: ವಿಶೇಷ ಸ್ಥಾನಮಾನದ ಜೊತೆಗೆ ರಾಜ್ಯ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕಾರ್ ಮೈತ್ರಿ ಕೂಟ ಮೇಲುಗೈ ಸಾಧಿಸಿದೆ. ಆದರೆ ಇದೆ ಮೊದಲ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಒಟ್ಟು 280 ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 9 ಗಂಟೆಗೆ ಪ್ರಕಟವಾದ ಫಲಿತಾಂಶದ ಪ್ರಕಾರ ಗುಪ್ಕಾರ್ ಕೂಟ 114 ಸ್ಥಾನ ಗೆದ್ದಿದೆ. ಬಿಜೆಪಿ 71 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇತರರು 60ಕ್ಕೂ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಹೈದರಾಬಾದ್ ಪಾಲಿಕೆ ಚುನಾವಣೆ, ರಾಜಸ್ಥಾನ ಮತ್ತು ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ಕಾಶ್ಮೀರ ಕಣಿವೆಯಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿದಂತಾಗಿದೆ.
Advertisement
I understand the temptation to over play the 3 seats the BJP has won in the valley but why underplay the 35 wins/leads of the @JKPAGD in Jammu province. We aren’t Kashmir based parties, we are political parties with strong support in both Kashmir AND Jammu.
— Omar Abdullah (@OmarAbdullah) December 22, 2020
Advertisement
ಜಮ್ಮು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೆ ಕಾಶ್ಮೀರದಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಶ್ರೀನಗರ ಮತ್ತು ಬಂಡಿಪೊರಾ ಜಿಲ್ಲೆಯ ತುಲೈಲ್‌ನಲ್ಲಿ ಬಿಜೆಪಿ ಜಯಗಳಿಸಿದೆ.
Advertisement
BJP's emergence as the single largest party in the recently held District Development Council polls is a big endorsement for the abrogation of Art 370! Not a single party in the PAGD, a group of 7 parties, including the NC and PDP, even come close.
Politics of development wins. pic.twitter.com/9vdLGMflt0
— BJP Jammu & Kashmir (@BJP4JnK) December 22, 2020
Advertisement
ಹಿಜ್ಬುಲ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಅಡಿ ಬಂಧನಕ್ಕೆ ಒಳಗಾದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಆಪ್ತ ವಹೀದ್ ಜಯಗಳಿಸಿದ್ದಾರೆ. ವಹೀದ್‌ಗೆ 1322 ಮತಗಳು ಬಿದ್ದರೆ ಬಿಜೆಪಿಯ ರೈನಾಗೆ 314 ಮತಗಳು ಬಿದ್ದಿದೆ.
Even in the Jammu region, a significant number of voters have rejected the divisive and polarising politics of the BJP. Both the Congress and the Gupkar Alliance have stood up to the BJP and may win as many seats as the BJP. That is a good sign
— P. Chidambaram (@PChidambaram_IN) December 22, 2020
ನ್ಯಾಷನಲ್ ಕಾನ್ಫರೆನ್ಸ್, ಪಿಪಲ್ ಡೆಮಾಕ್ರಾಟೆಕ್ ಪಾರ್ಟಿ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಎಂ) ಸೇರಿದಂತೆ 7 ಪಕ್ಷಗಳು ಗುಪ್ಕಾರ್ ಮೈತ್ರಿಕೂಟವನ್ನು ರಚಿಸಿ ಚುನಾವಣೆ ಎದುರಿಸಿತ್ತು. 280 ಸ್ಥಾನಗಳಿಗೆ ಒಟ್ಟು 2,181 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನವೆಂಬರ್ 28 ರಿಂದ ಡಿಸೆಂಬರ್ 19ರವರೆಗೆ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆದಿತ್ತು.