ನವದೆಹಲಿ: ಜನವರಿ 25 ಮತದಾರ ದಿನದಂದು ಕೇಂದ್ರ ಚುನಾವಣಾ ಆಯೋಗ ಡಿಜಿಟಲ್ ವೋಟರ್ ಐಡಿ ಡೌನ್‍ಲೋಡ್ ಮಾಡಿಕೊಳ್ಳುವ ಅವಕಾಶವನ್ನ ನೀಡಿದೆ. ನಿಮ್ಮ ಡಿಜಿಟಲ್ ವೋಟರ್ ಐಡಿ ಪಿಡಿಎಫ್ ಫಾರ್ಮೆಟ್ ನಲ್ಲಿ ಡೌನ್‍ಲೋಡ್ ಆಗುತ್ತದೆ. ಡೌನ್‍ಲೋಡ್ ಮಾಡಿಕೊಳ್ಳುವ ವೋಟರ್ ಐಡಿ ಇ-ಆಧಾರ್ ಮಾದರಿಯಲ್ಲಿ ಇರೋದರಿಂದ ಎಡಿಟ್ ಮಾಡಲು ಸಾಧ್ಯವಿಲ್ಲ.
ಯಾರೆಲ್ಲ ಡೌನ್‍ಲೋಡ್ ಮಾಡಬಹುದು?: ವೋಟರ್ ಐಡಿಗಾಗಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಅರ್ಜಿ ಸಲ್ಲಿಸಿದವರು ಜನವರಿ 31ರವರೆಗೆ ಡೌನ್‍ಲೋಡ್ ಮಾಡಬಹುದು. 2021 ಫೆಬ್ರವರಿ 1ರಿಂದ ಎಲ್ಲ ಮತದಾರರಿಗೆ ಈ ಸೌಲಭ್ಯ ಲಭಿಸಲಿದೆ. ಡಿಜಿಟಲ್ ಕಾಪಿ ಡೌನ್‍ಲೋಡ್ ಗಾಗಿ 25 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತೆ.
ಹೇಗೆ ಡೌನ್‍ಲೋಡ್ ಮಾಡೋದು?:
1. voterportal.eci.gov.in ಲಿಂಕ್ ಓಪನ್ ಮಾಡಿ ಮೊಬೈಲ್ ನಂಬರ್, ಇ ಮೇಲ್ ಐಡಿ ಜೊತೆ ನಿಮ್ಮ ಖಾತೆ ತೆರೆಯಿರಿ.
2. ಲಾಗಿನ್ ಮಾಡಿದ ನಂತರ Download e-EPIC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಮೂರನೇಯದಾಗಿ ನಿಮ್ಮ ವೋಟರ್ ಐಡಿ ಸಂಖ್ಯೆಯನ್ನ ಎಂಟ್ರಿ ಮಾಡಿ.
4. ನಂತರ ಮೊಬೈಲ್ ಗೆ ಬಂದ ಓಟಿಪಿ ನಮೂದಿಸಿ.
5. ಈಗ Download e-EPIC ಮೇಲೆ ಕ್ಲಿಕ್ ಮಾಡಿ.
6. ಈಗ ಪಿಡಿಎಫ್ ರೂಪದಲ್ಲಿ ನಿಮ್ಮ ವೋಟರ್ ಐಡಿ ಡೌನ್‍ಲೋಡ್ ಆಗುತ್ತೆ.
ನೀವು ಕೆವೈಸಿ ಪೂರ್ಣಗೊಳಿಸಿದ ನಂತರವೇ ಡಿಜಿಟಲ್ ವೋಟರ್ ಐಡಿ ಡೌನ್‍ಲೋಡ್ ಮಾಡಲು ಸಾಧ್ಯವಾಗುತ್ತದೆ. ವೋಟರ್ ಪೋರ್ಟಲ್ ಲಾಗಿನ್ ಆಗಿ ಮೊಬೈಲ್ ನಂಬರ್ ನಿಂದ ಕೆವೈಸಿ (KYC) ಫಿಲ್ ಮಾಡಬಹುದು. ರಿಜಿಸ್ಟರ್ ಮೊಬೈಲ್ ನಂಬರ್ ಫೋನ್ ಇಲ್ಲದೇ ವೋಟರ್ ಐಡಿ ಡೌನ್‍ಲೋಡ್ ಮಾಡಲು ಆಗಲ್ಲ.
ವೋಟರ್ ಐಡಿ ಡಿಜಿಟಲ್ ಕಾಪಿಯನ್ನ ಎರಡು ವಿಧಾನಗಳಲ್ಲಿ ನೀವು ಪಡೆದುಕೊಳ್ಳಬಹುದು. ಮೊದಲನೇಯದ್ದು ಮೊಬೈಲ್ ಆ್ಯಪ್ (Voter Helpline), ಎರಡನೇಯದ್ದು ಚುನಾವಣಾ ಆಯೋಗದ ವೆಬ್‍ಸೈಟ್ ಮೂಲಕ ಹೋಗಿ ವೋಟರ್ ಐಡಿ ಡಿಜಿಟಲ್ ಕಾಪಿ ಪಡೆಯಬಹುದು.