ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಹೌದು. ಕೋವಿಡ್ 19 ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರ ನಡೆದಿದೆ. ಪರಿಣಾಮ ಅಮೆರಿಕ, ಚೀನಾವನ್ನು ಹಿಂದಿಕ್ಕಿ ಭಾರತ 2020ರ ಅವಧಿಯಲ್ಲಿ ಅಗ್ರ ಸ್ಥಾನವನ್ನು ಸಂಪಾದಿಸಿದೆ.
Advertisement
ಯುನೈಟೆಡ್ ಕಿಂಗ್‍ಡಮ್‍ನ ಎಸಿಐ ವರ್ಲ್ಡ್ ಈ ವರದಿ ನೀಡಿದ್ದು, 2020ರಲ್ಲಿ 25.5 ಶತಕೋಟಿ ರಿಯಲ್ ಟ್ರೈಮ್ ಆನ್‍ಲೈನ್ ವ್ಯವಹಾರ ನಡೆದಿದೆ. ಭೀಮ್ ಆಪ್, ಗೂಗಲ್ ಪೇ, ಪೇಟಿಂಎ, ಫೋನ್ ಪೇ ಸೇರಿದಂತೆ ಹಲವು ಆಪ್‍ಗಳಿಂದ ವ್ಯವಹಾರ ನಡೆಸಿದ ಪರಿಣಾಮ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.
Advertisement
Advertisement
ಯಾವ ದೇಶದಲ್ಲಿ ಎಷ್ಟು?
ಚೀನಾ 15.7 ಶತಕೋಟಿ, ದಕ್ಷಿಣ ಕೊರಿಯಾ 6 ಶತಕೋಟಿ, ಥಾಯ್ಲೆಂಡ್ 5.2 ಶತಕೋಟಿ, ಇಂಗ್ಲೆಂಡ್ 2.8 ಶತಕೋಟಿ, ಅಮೆರಿಕ 1.2 ಶತಕೋಟಿ ವ್ಯವಹಾರ ನಡೆಸಿದೆ.
Advertisement
ಭಾರತದಲ್ಲಿ ರಿಯಲ್ ಟೈಂ ವ್ಯವಹಾರ ಪಾಲು ಶೇ.15.6ರಷ್ಟು ಇದ್ದರೆ ಎಲೆಕ್ಟ್ರಾನಿಕ್ ಪಾವತಿ ಪಾಲು ಶೇ.22.9 ರಷ್ಟು ಇದೆ. ನಗದು ಮೂಲಕ ದೇಶದಲ್ಲಿ ಶೇ.61.4 ರಷ್ಟು ವ್ಯವಹಾರ ನಡೆದಿದೆ ಎಂದು ಅಧ್ಯಯನ ತಿಳಿಸಿದೆ.
2025ರ ವೇಳೆ ರಿಯಲ್ ಟೈಂ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳು ಕ್ರಮವಾಗಿ ಶೇ.37.1 ಮತ್ತು ಶೇ.34.6ಕ್ಕೆ ಏರಿಕೆಯಾಗಲಿದೆ. ನಗದು ಮೂಲಕ ನಡೆಸುವ ವ್ಯವಹಾರ ಶೇ.28.3ಕ್ಕೆ ಕುಸಿಯಬಹುದು. 2024ರ ವೇಳೆಗೆ ರಿಯಲ್‍ಟೈಂ ಪೇಮೆಂಟ್ ವ್ಯವಸ್ಥೆ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚಾಗಲಿದೆ ಎಂದು ವರದಿ ಅಂದಾಜಿಸಿದೆ.
ಪೇಟಿಎಂ, ಫೋನ್‍ಪೇ, ಪೈನ್ ಲ್ಯಾಬ್ಸ್, ರಾಝರ್ ಪೇ, ಭಾರತ್ ಪೇ ಸೇರಿದಂತೆ ಇನ್ನಿತರ ಸಂಸ್ಥೆಗಳು ಕೋವಿಡ್ 19 ಅವಧಿಯಲ್ಲಿ ಬೆಳವಣಿಗೆ ಸಾಧಿಸಿದೆ. ಕ್ಯಾಶ್‍ಬ್ಯಾಕ್, ಕೊಡುಗೆಗಳನ್ನು ಪ್ರಕಟಿಸಿದರಿಂದ ಗ್ರಾಹಕರು ಈ ಸೇವೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.
ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಆರಂಭಿಸಿದ ಪ್ರಿ ಪೇಯ್ಡ್ ಇನ್‍ಸ್ಟ್ರುಮೆಂಟ್ಸ್(ಪಿಪಿಐ), ಯುನಿವರ್ಸಲ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಅಲ್ಲದೇ ಭೀಮ್ ಆಪ್‍ನಿಂದಾಗಿ ಕೆಲ ವರ್ಷದಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಹೇಳಿದೆ.
ಯರ್ನೆಸ್ಟ್ ಯಂಗ್ ಸಂಸ್ಥೆಯ ಪ್ರಕಾರ 2020 ರಿಂದ 25ರ ಹಣಕಾಸು ವರ್ಷದಲ್ಲಿ ಶೇ.27 ರಷ್ಟು ಡಿಜಿಟಲ್ ಬೆಳವಣಿಗೆಯಾಗಬಹುದು. 2020ರಲ್ಲಿ 2,153 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ 2025ರ ವೇಳೆಗೆ ಇದು 7,092 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಹೇಳಿದೆ.
ಪ್ರತಿ ತಿಂಗಳು ಯುಪಿಐ ವ್ಯವಹಾರ ಶೇ.18.7ರಷ್ಟು ಏರಿಕೆ ಕಾಣುತ್ತಿದೆ ಎಂದು ಎನ್‍ಪಿಸಿಐ ಹೇಳಿದೆ. 2021ರ ಫೆಬ್ರವರಿ 4.25 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ ಮಾರ್ಚ್ ನಲ್ಲಿ 5.05 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ 2,292.90 ದಶಲಕ್ಷದಿಂದ 2,731.68 ದಶಲಕ್ಷಕ್ಕೆ ವ್ಯವಹಾರ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.