ನವದೆಹಲಿ: 59 ಅಪ್ಲಿಕೇಶನ್ ನಿಷೇಧಿಸಿ ಡಿಜಿಟಲ್ ಸ್ಟ್ರೈಕ್ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ.
ಎರಡು ದೇಶಗಳ ವ್ಯಾಪಾರ ವಿಚಾರದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಚೀನಾದಿಂದ ಆಮದು ಜಾಸ್ತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಭಾರತ ಚೀನಾದಿಂದ ಆಮದು ಆಗುವ ವಸ್ತುಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಏರಿಸಲು ಸಿದ್ಧತೆ ನಡೆಸುತ್ತಿದೆ.
Advertisement
Advertisement
ಕೇಂದ್ರ ಸರ್ಕಾರ ಈಗಾಗಲೇ ಭಾರತದಲ್ಲಿ ತಯಾರಾಗುವ ವಸ್ತುಗಳು ಮತ್ತು ಚೀನಾದಲ್ಲಿ ತಯಾರಾಗುವ ವಸ್ತುಗಳ ಮಾಹಿತಿಯನ್ನು ಪಡೆಯುತ್ತಿದೆ. ಯಾವ ವಸ್ತುಗಳ ಮೇಲೆ ಸುಂಕ ಏರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ 2-3 ತಿಂಗಳ ಒಳಗಡೆ ಯಾವ ವಸ್ತುಗಳಿಗೆ ಎಷ್ಟು ಪ್ರಮಾಣದಲ್ಲಿ ಏರಿಸಬಹುದು ಎಂಬ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
ಕೇಂದ್ರ ಸರ್ಕಾರ ಈಗಾಗಲೇ ಕೈಗಾರಿಕಾ ಒಕ್ಕೂಟಗಳಿಗೆ ಪತ್ರ ಬರೆದು ಅಭಿಪ್ರಾಯಗಳನ್ನು ಕೇಳಿದೆ. ಭಾರತದಲ್ಲೇ ತಯಾರಾಗುವ ವಸ್ತುಗಳು ಯಾವುದು? ಮೇಕ್ ಇನ್ ಇಂಡಿಯಾ ಅಡಿ ಸಮಸ್ಯೆ ಆಗದಂತೆ ಉತ್ಪಾದಿಸಬಹುದು? ಚೀನಾದಿಂದ ಅಗತ್ಯವಾಗಿ ಆಮದು ಮಾಡಬೇಕಾದ ವಸ್ತುಗಳು ಯಾವುದು? ಇವುಗಳ ಬಗ್ಗೆ ಒಕ್ಕೂಟಗಳು ಪ್ರತಿಕ್ರಿಯೆ ನೀಡಿದೆ.
Advertisement
ಒಕ್ಕೂಟಗಳು ಚೀನಾದಿಂದ ಆಮದಾಗುವ ಎಲೆಕ್ಟ್ರಾನಿಕ್ಸ್ ವಸ್ತುಗಳು, ಆಟಿಕೆ ಸಾಮಾಗ್ರಿಗಳು ಸೇರಿದಂತೆ ಹಲವು ಉತ್ಪನ್ನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಮೇಕ್ ಇನ್ ಇಂಡಿಯಾದ ಅಡಿ ತಯಾರಿಸಬಹುದಾದ ವಸ್ತುಗಳ ಬಗ್ಗೆ ತಿಳಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಒಂದು ದೇಶದ ಆಮದು ಹೆಚ್ಚಾಗಿ ರಫ್ತು ಕಡಿಮೆಯಾದಾಗ ಉಂಟಾಗುವ ಸ್ಥಿತಿಯನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. ಆದು ಇಳಿದರೆ ಸಹಜವಾಗಿ ವ್ಯಾಪಾರ ಕೊರತೆ ಇಳಿಕೆಯಾಗುತ್ತದೆ.
2018-19ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾದ ಮಧ್ಯೆ 88 ಶತಕೋಟಿ ಡಾಲರ್ ವ್ಯವಹಾರ ನಡೆದಿದೆ ಭಾರತಕ್ಕೆ ಒಟ್ಟು 53.5 ಶತಕೋಟಿ ಡಾಲರ್ ವ್ಯಾಪಾರ ಕೊರತೆಯಿದೆ.