ಚಿಕ್ಕಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ಕೈ ಎರಡು ಕಣ್ಣುಗಳಿದ್ದಂತೆ ಅಂತ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳಿವೆಯಾ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರು ಒಂದೇ ಕೈ ಎರಡು ಕಣ್ಣಾಗಿ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯಗಳಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ತತ್ವ ಸಿದ್ದಾಂತಗಳಿವೆ. ಅದರಡಿಯಲ್ಲಿ ಎಲ್ಲರ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಭಿನ್ನಾಭಿಪ್ರಾಯ ಇದೆ ಯಾರೋ ಮಾಹಿತಿ ಹೇಳಬಹುದು. ಆದ್ರೆ ಯಾರು ಅದನ್ನ ನಂಬಬಾರದು ಎಂದರು.
ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‍ಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿರುಗೇಟು ನೀಡಿದರು. ಪ್ರಜಾಪ್ರಭುತ್ವದ ಅರ್ಥ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ.ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದ ಬಿಜೆಪಿಯವರಿಂದ ನಾವು ಕಲಿಯಬೇಕಿಲ್ಲ. ಪ್ರಜಾಪ್ರಭುತ್ವದ ಸಿದ್ದಾಂತ ಒಪ್ಪಿರುವುದು ಕಾಂಗ್ರೆಸ್ ಪಕ್ಷ. ಹೋರಾಟದ ಹಿನ್ನೆಲೆ ದೇಶದಲ್ಲಿ ಜನತಂತ್ರ ವ್ಯವಸ್ಥೆ ಬಂದಿರೋದು. ನಿನ್ನೆ ಮೊನ್ನೆ ಬಿಜೆಪಿ ಸೇರಿದ ಸುಧಾಕರ್ ಅವರಿಂದ ನಾವು ಕಲಿಯಬೇಕಿಲ್ಲ. ಯಾವ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರು ಎಲ್ಲಿರಿಗೂ ಗೊತ್ತು.
ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿದ್ದು ಸುಧಾಕರ್ ಎಂದು ಟೀಕಿಸಿದರು.
ಬಿಜೆಪಿ ನಾಯಕರಿಗೆ ಗಂಡಸುತನ ಇದ್ರೆ ಕೋರ್ಟಿಗೆ ಬರಲಿ: ಟಿಬಿ ಜಯಚಂದ್ರ ಚಾಲೆಂಜ್ https://t.co/qzqJl5GCN4#Chikkaballapur #BJP #Congress #TBJayachandra @BJP4Karnataka @INCKarnataka
— PublicTV (@publictvnews) August 4, 2020