ನವದೆಹಲಿ: ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಕೋವಿಡ್ ಔಷಧ 2-ಡಿಆಕ್ಸಿ-ಡಿ-ಗ್ಲುಕೋಸ್(2-ಡಿಜಿ) ಹೆಸರಿನ ಪೌಡರ್ ಗೆ ದರ ನಿಗದಿಯಾಗಿದೆ. ಒಂದು ಪ್ಯಾಕ್‍ಗೆ 990 ರೂಪಾಯಿ ಎಂದು ಡಿಆರ್‌ಡಿಒ ತಿಳಿಸಿದೆ.
.@DRDO_India द्वारा विकसित दवा 2-DG अब अस्पतालों में उपलब्ध होगी, जो मरीजों को कोरोना के खिलाफ़ लड़ाई लड़ने में अहम हथियार साबित होगी। आज मैंने रक्षा मंत्री श्री @rajnathsingh जी के साथ इस दवा को लॉन्च किया।@PMOIndia @MoHFW_INDIA #Unite2FightCorona pic.twitter.com/WahV7Cbqa0
— Dr Harsh Vardhan (@drharshvardhan) May 17, 2021
ಡಾ.ರೆಡ್ಡೀಸ್ ಲ್ಯಾಬ್ ಅಭಿವೃದ್ಧಿ ಪಡಿಸಿರುವ ಕೋವಿಡ್ ಪೌಡರ್ ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಸಿಗಲಿದೆ. 2ಡಿಜಿ ಹೆಸರಿನ ಪೌಡರ್ ಅನ್ನು ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಜಿಸಿಐ) ಅನುಮೋದನೆ ನೀಡಿತ್ತು. ಬಳಿಕ ಔಷಧವನ್ನು ಕೆಲ ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಬಿಡುಗಡೆ ಮಾಡಿದ್ದರು.
ಬಳಕೆ ಹೇಗೆ?
ಈ ಪೌಡರ್ ಅನ್ನು ನೀರಿನಲ್ಲಿ ಕಲಕಿ ಸೇವಿಸಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಪೌಡರ್ ಸೇವಿಸಿದ ಸೋಂಕಿತರು ಆಸ್ಪತ್ರೆಯಿಂದ ಬಹಳ ಬೇಗ ಚೇತರಿಕೆ ಕಾಣುತ್ತಿದ್ದಾರೆ. ಪ್ರತಿದಿನ 2 ಪ್ಯಾಕ್ 2ಜಿಡಿ ಔಷಧ ಪಡೆದ ಶೇ.42ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಆಕ್ಸಿಜನ್ ಸಪೋರ್ಟ್ ನಿಂದ ಹೊರ ಬಂದಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ. ಕೊರೊನಾ ದೇಶೀ ಔಷಧ ಬಿಡುಗಡೆ- ಎಲ್ಲಿ ಸಿಗುತ್ತೆ? ಎಷ್ಟು ಪರಿಣಾಮಕಾರಿ? ಬೆಲೆ ಎಷ್ಟು? ಡಿಆರ್‌ಡಿಒ
ಎಷ್ಟು ಪರಿಣಾಮಕಾರಿ?
ಈ ಔಷಧ ಕೊರೊನಾ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್ ಜೀವಕೋಶದ ಒಳಗಡೆ ಸಂಗ್ರಹಗೊಂಡು ದ್ವಿಗುಣಗೊಳ್ಳುವುದನ್ನು ತಡೆದು ಆದರ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಈ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.
ಅನುಮತಿ ಸಿಕ್ಕಿದ್ದು ಹೇಗೆ?
ಕೋವಿಡ್ ಮೊದಲ ಅಲೆ ಹೆಚ್ಚಾದ ಸಮಯದಲ್ಲಿ ಪ್ರಧಾನಿ ಮೋದಿ ಅವರ ಸಲಹೆಯ ಮೇರೆ ಡಿಆರ್ಡಿಒದ ವಿಭಾಗವಾದ ದಿ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯೂಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿ ಸಹಯೋಗದಲ್ಲಿ ಈ ಔಷಧವನ್ನು ಮೊದಲ ಪ್ರಯೋಗಕ್ಕೆ ಬಳಸಿತ್ತು.
ಪ್ರಯೋಗದ ಸಮಯದಲ್ಲಿ ಸಾರ್ಸ್-ಕೋವ್-2 ವೈರಸ್ ಮೇಲೆ ಪರಿಣಾಮಕಾರಿಯಾಗಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 2020ರ ಮೇ-ಅಕ್ಟೋಬರ್ ವೇಳೆ ಎರಡನೇ ಹಂತದಲ್ಲಿ ದೇಶದ 17 ಆಸ್ಪತ್ರೆಗಳ 110 ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. 2020ರ ಡಿಸೆಂಬರ್ ನಿಂದ 2021ರ ಮಾರ್ಚ್ ಅವಧಿಯಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳ 27 ಆಸ್ಪತ್ರೆಗಳಲ್ಲಿ 3ನೇ ಹಂತದ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ವೇಳೆ ಉತ್ತಮ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಈಗ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.