ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್‌

Public TV
2 Min Read
Rachita Ram New Car 2

ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ರಚಿತಾರಾಮ್ ಹುಟ್ಟುಹಬ್ಬಕ್ಕೆ ಒಂದೆಡೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದರೆ, ಮತ್ತೊಂದೆಡೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್ ಬರುತ್ತಿವೆ.

rachita ram

ಹೌದು ಸ್ಯಾಂಡಲ್‍ವುಡ್ ಸುಂದರಿ ರಚಿತಾರಾಮ್ ಹುಟ್ಟುಹಬ್ಬವನ್ನು ಚಂದನವನದ ನಟ, ನಟಿಯರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ನೇರವಾಗಿ ವಿಶ್ ಮಾಡಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

rachita ram 1

ಮತ್ತೊಂದೆಡೆ ರಚಿತಾ ರಾಮ್ ಅವರ ಹುಟ್ಟುಹಬ್ಬದ ಅಂಗವಾಗಿ ಹಲವು ಸರ್ಪ್ರೈಸ್‌ಗಳು ಬಂದಿದ್ದು, ಗುಳಿಕೆನ್ನೆ ಚೆಲುವೆಗಾಗಿ ತಯಾರಿಸಿದ ಹಲವು ಸಿನಿಮಾಗಳ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರಚಿತಾ ರಾಮ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಹಾಗೂ ರಮೇಶ್ ಅರವಿಂದ್ ಜೊತಿಗಿನ 100 ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇದಲ್ಲದೆ ಹತ್ತಾರು ಸಿನಿಮಾಗಳು ರಚಿತಾ ರಾಮ್ ಲಿಸ್ಟ್ ನಲ್ಲಿವೆ. ಈ ಮೂಲಕ ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯಸ್ಟ್ ನಟಿಯಾಗಿದ್ದಾರೆ.

 

View this post on Instagram

 

Official Announcement My Next..! Thanks to the team Lilly for releasing official poster on my Birthday???????? @vijay_s_gowda_

A post shared by Rachita Ram (@rachita_instaofficial) on

ಈ ಎಲ್ಲ ಸಿನಿಮಾಗಳ ಹೊರತಾಗಿಯೂ ರಚಿತಾ ರಾಮ್ ಹುಟ್ಟುಹಬ್ಬದಂದು ಹಲವು ಸಿನಿಮಾಗಳು ಘೋಷಣೆಯಾಗಿವೆ. ಈ ಪೈಕಿ ಲಿಲ್ಲಿ, ನೀನಾಸಂ ಸತೀಶ್ ಅವರ ಮುಂದಿನ ಚಿತ್ರ ಮ್ಯಾಟ್ನಿ ಹಾಗೂ ಪುಷ್ಪಕ ವಿಮಾನ ತಂಡದ ಮತ್ತೊಂದು ಚಿತ್ರ ರಚಿತಾಗೆ ಒಲಿದು ಬಂದಿದೆ. ಅಂದಹಾಗೆ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ, ಸದ್ಯದಲ್ಲೇ ಸಿನಿಮಾ ಹೆಸರು ತಿಳಿಸುವುದಾಗಿ ರಚಿತಾ ಹೇಳಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಚಿತಾ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲಾಗಿದೆ. ರಚಿತಾ ರಾಮ್ ಸಹ ಸಂತಸವಾಗಿಯೇ ಎಲ್ಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಹಲವು ಗಣ್ಯರು ಡಿಂಪಲ್ ಕ್ವೀನ್‍ಗೆ ವಿಶ್ ಮಾಡಿದ್ದಾರೆ. ಗುಳಿಕೆನ್ನೆ ಚೆಲುವೆಯ ಹುಟ್ಟುಹಬ್ಬ ಫುಲ್ ಕಲರ್‍ಫುಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *