ನೆಲಮಂಗಲ: ಲಿಂಗೈಕ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿ ಹಿನ್ನೆಲೆ ಇಂದು ರಾಮನಗರ ಜಿಲ್ಲಾಡಳಿತ ಮತ್ತು ಮಾಗಡಿ ತಾಲೂಕು ಆಡಳಿತ ಜಂಟಿ ಭೇಟಿ ನಡೆಸಿದರು.
Advertisement
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀಸಿದ್ದಲಿಂಗ ಸ್ವಾಮೀಜಿ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸಿ ಮಂಜುನಾಥ್, ಕೆ.ಆರ್.ಐ.ಡಿ.ಎಲ್ ಎಂ.ಡಿ ಕುಮಾರಸ್ವಾಮಿ ಗುದ್ದಲಿ ಪೂಜೆ ನಡೆಸಿದರು. ಕೆ.ಆರ್.ಐ.ಡಿ.ಎಲ್ ಅಡಿಯಲ್ಲಿ ನಿರ್ಮಾಣ ವಾಗುತ್ತಿರುವ 111 ಅಡಿಗಳ ಶ್ರೀಗಳ ಪುತ್ಥಳಿ ಜೊತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
Advertisement
Advertisement
ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ಕಾಮಗಾರಿ ವೀಕ್ಷಣೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಸಮಸ್ಯೆಗೆ ಸ್ಥಳದಲ್ಲೆ ಪರಿಶೀಲನೆ, 27 ಇಲಾಖೆಗೆ ಸಮನ್ವಯತೆ ನಡೆಸಲಾಯಿತು. ನೆಲಮಂಗಲ ಸಮೀಪದ ಸೋಲೂರು ಹೋಬಳಿ ವೀರಾಪುರ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಹ ಭಾಗಿಯಾಗಿ ವೇದಿಕೆಯಲ್ಲಿ ಮಾತನಾಡಿದರು. ಇದೇ ವೇಳೆಯಲ್ಲಿ ಹಲವು ಮಠದ ಸ್ವಾಮೀಜಿಗಳು ಭಾಗಿಯಾಗಿದ್ದು ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ನಡೆಸಿದರು.
Advertisement
ಗುರುವಾರ ಹಿರಿಯ ಶ್ರೀಗಳ ಹುಟ್ಟು ಹಬ್ಬದ ದಿನ ಚಾಲನೆಗೊಳ್ಳಬೆಕ್ಕಿದ್ದ ಕಾರ್ಯಕ್ರಮ, ಇಂದು ಚಾಲನೆಗೊಂಡಿತು. ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಸಮಾರಂಭ ಜರಗಿದ್ದು ವಿಶೇಷವಾಗಿತ್ತು. ಡಾ ಶ್ರೀ. ಶ್ರೀ. ಶಿವಕುಮಾರ ಸ್ವಾಮೀಜಿ ಜನ್ಮಸ್ಥಳ ವೀರಾಪುರ ಅಭಿವೃದ್ಧಿಗೆ ಒತ್ತು, ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯ 111 ಅಡಿ ಉದ್ದದ ಪುತ್ಥಳಿ ನಿರ್ಮಾಣ ಜೊತೆ ಜೊತೆಗೆ ಇಂದು ಸಮುದಾಯ ಭವನ, ದೇವಾಲಯ, ಶ್ರೀಗಳ ಹಳೆಯ ಮನೆ, ಗ್ರಾಮದ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಿದರು.