ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಕ್ರೀಮ್‍ಗಳನ್ನು ಬಳಕೆ ಮಾಡುತ್ತಲಿರುತ್ತಾರೆ. ಆದರೆ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಹಿಳೆಯರಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಹೆಚ್ಚಾಗುತ್ತವೆ. ಸುಕ್ಕುನ್ನು ಹೊಗಲಾಡಿಸಲು ಹೆಂಗಳೆಯರು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಮ್‍ಗಳ ಬಳಕೆಯನ್ನು ಮಾಡಿರುತ್ತಾರೆ. ಆದರೆ ನೀವು ಒಮ್ಮೆ ಈ ಮದ್ದುಗಳನ್ನು ಬಳಸಿ ನೋಡಿ.
Advertisement
ಆಯಾಸವಾದರೆ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗುತ್ತಿಲ್ಲ ಎಂದರ್ಥ. ನಿದ್ರೆಯ ಕೊರತೆ ನಿಮ್ಮ ಚರ್ಮವನ್ನು ಮಂದವಾಗಿ, ಮಸುಕಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ, ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಮೂಡಲಾರಂಭಿಸುತ್ತದೆ.
Advertisement
* ದೇಹದಲ್ಲಿ ನೀರಿನ ಕೊರತೆಯುಂಟಾದರೆ ಕಣ್ಣುಗಳ ಕೆಳಗೆ ಸುಕ್ಕಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು. ಜೊತೆಗೆ ಸೌತೆಕಾಯಿಯನ್ನೂ ಹೆಚ್ಚು ಸೇವಿಸಬೇಕು.
Advertisement
Advertisement
* ಪ್ರತಿದಿನ ಬಾದಾಮಿ ಎಣ್ಣೆಯಿಂದ ಕಣ್ಣುಗಳ ಕೆಳಗೆ ಕೈಗಳಿಂದ ಲಘುವಾಗಿ ಮಸಾಜ್ ಮಾಡಿದರೆ ಸುಕ್ಕು ಸಮಸ್ಯೆ ನಿವಾರಣೆಯಾಗುತ್ತದೆ.
* ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಅದನ್ನು ಚೆನ್ನಾಗಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಸುಕ್ಕು ಕಡಿಮೆಯಾಗುತ್ತಾ ಬರುತ್ತದೆ.
* ಸೌತೆಕಾಯಿಯ ರಸವನ್ನು ಹತ್ತಿ ಸಹಾಯದಿಂದ ಸುಕ್ಕು ಇರುವ ಕಡೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಣ್ಣಿನ ಕೆಳಗಿರುವ ಸುಕ್ಕು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
* ರಾತ್ರಿ ಮಲಗುವಾಗ ಅಲೋವೆರಾ ಅನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
* ಎರಡು ಟೀಸ್ಪೂನ್ ಮೊಸರಿಗೆ ಒಂದು ಟೀಚಮಚ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಈ ಪೇಸ್ಟ್ ಅನ್ನು ಡಾರ್ಕ್ ಸರ್ಕಲ್ ಆದ ಜಾಗಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಬೇಕು.