ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾಸ್ವಾಮಿ ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಕಿಟ್ ವಿತೆರಣೆ ಮಾಡಿದ್ದಾರೆ. ಇದನ್ನೂ ಓದಿ: ಹೌದು ತಂದೆಯಾಗುತ್ತಿರುವುದು ನಿಜ: ನಿಖಿಲ್
ಡಾನ್ಸ್ ಮಾಸ್ಟರ್ ಭೂಷಣ್ ಅವರೊಟ್ಟಿಗೆ ಸೇರಿ ಆಹಾರ ಕಿಟ್ ವಿತರಿಸುವ ಕೆಲಸಕ್ಕೆ ನಿಖಿಲ್ ಕೈ ಹಾಕುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಕಿಟ್ ವಿತರಣೆ ಮಾಡುವ ಮೂಲಕವಾಗಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ತಮ್ಮಿಂದಾದಷ್ಟು ಸಹಾಯವನ್ನು ಮಾಡಿದ್ದಾರೆ. ಇದನ್ನೂ ಓದಿ: ‘ಕಾಟನ್ ಪೇಟೆ ಗೇಟ್’ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲಿದ್ದಾರೆ ಸನ್ನಿ..!
View this post on Instagram
ಈ ಹಿಂದೆ ನಿಖಿಲ್ ಅವರು ರಾಮನಗರ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ವಾಟರ್ ಬೋರ್ಡ್ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿದ್ದರು. ಹಾಗೂ ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ, ಕೊಪ್ಪದಲ್ಲಿ ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಆರೋಗ್ಯ ಕೇಂದ್ರದವರು, ಕೊಪ್ಪ ಆರಕ್ಷಕ ಸಿಬ್ಬಂದಿಗಳು, ಜನಪದ ಕಲಾವಿದರು ಮತ್ತು ಆಕ್ಟಿವ್ ಸೋಂಕಿತರಿಗೆ ಫುಡ್ ಕಿಟ್ ವಿತರಿಸಿದ್ದರು. ಈಗಾಗಲೇ ಹಲವು ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಸಹಯಾ ಹಸ್ತ ಚಾಚಿದ್ದಾರೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ
View this post on Instagram
ಕೆಲ ದಿನಗಳ ಹಿಂದೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ತಾವು ಅಜ್ಜನಾಗುತ್ತಿರುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸಂತಸದ ಸುದ್ದಿಯನ್ನು ರಿವೀಲ್ ಮಾಡಿದ್ದರು. ನಟ ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿರುವುದುನ್ನು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.