ಜೈಪುರ್: ರಜೆ ಸಿಗದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲೇ ಅರಿಶಿನ ಶಾಸ್ತ್ರವನ್ನು ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.
ಮದುವೆಯ ಮುಂಚಿನ ಶಾಸ್ತ್ರವಾದ ಅರಿಶಿನ ಹಚ್ಚುವ ಕಾರ್ಯಕ್ರಮಕ್ಕೆ ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಎದುರೆ ಅರಿಶಿಣ ಹಚ್ಚಿಸಿಕೊಂಡಿದ್ದಾರೆ. ರಾಜಸ್ಥಾನದ ದುಂಗರ್‌ಪುರ್ ಕೊಟ್ವಾಲಿ ಪೊಲೀಸ್ ಸ್ಟೇಷನ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆಗೆ ಮದುವೆ ಕಾರ್ಯಕ್ರಮಗಳಿಗೆ ರಜೆ ಸಿಕ್ಕಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಪೊಲೀಸ್ ಇಲಾಖೆ ರಜೆ ನೀಡಿಲು ನಿರಾಕರಿಸಿದೆ.
Rajasthan: ‘Haldi’ ceremony of a woman police constable who is posted at Dungarpur police station was held at station premises, as couldn’t avail leave amid surge in COVID19 cases. (23/4) pic.twitter.com/S1KoKc99yB
— ANI (@ANI) April 24, 2021
ಈ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಬಳಿಯೇ ಸಹೋದ್ಯೋಗಿಗಳು ಪೊಲೀಸ್ ಪೇದೆಗೆ ಅರಿಶಿನ ಹಚ್ಚುವ ಶಾಸ್ತ್ರವನ್ನು ಆಚರಿಸಿದ್ದಾರೆ. ಈ ಶಾಸ್ತ್ರದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪೊಲೀಸ್ ಪೇದೆ ಮದುವೆ ಶಾಸ್ತ್ರಗಳ ಮಧ್ಯೆಯು ಕರ್ತವ್ಯದಲ್ಲಿ ಭಾಗಿಯಾಗಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.