– ಕೈಯಲ್ಲಿ ಗನ್ ಹಿಡಿದು ಬಂದಿದ್ದ ವ್ಯಕ್ತಿ
ದೆಹಲಿ: ಗನ್ ಹಿಡಿದು ಪೊಲೀಸ್ ಠಾಣೆಗೆ ಬಂದ ಅತ್ಯಾಚಾರ ಸಂತ್ರಸ್ತೆ ತಂದೆ ತನ್ನನ್ನು ಬಂಧಿಸುವಂತೆ ಒತ್ತಾಯಿಸಿದ ಘಟನೆ ಗ್ರೇಟರ್ ನೋಯ್ಡಾದ ಸೂರಜಪುರನಲ್ಲಿ ನಡೆದಿದೆ. ತನ್ನನ್ನು ಬಂಧಿಸದಿದ್ರೆ ಠಾಣೆಯಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ವ್ಯಕ್ತಿ ಬೆದರಿಕೆ ಹಾಕಿದ್ದನು.
ಕೆಲ ದಿನಗಳ ಹಿಂದೆ ಗನ್ ಹಿಡಿದು ಬಂದ ವ್ಯಕ್ತಿಯ ಎಂಟು ವರ್ಷದ ಮಗಳ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ್ದನು. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮಗಳ ಮೇಲೆ ಅತ್ಯಾಚಾರ ಎಸಗಿದವನ ಮೇಲೆ ನಾನು ಸೇಡು ತೀರಿಸಿಕೊಳ್ಳಬೇಕು. ಹಾಗಾಗಿ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಬಾಲಕಿ ತಂದೆ ಹೇಳಿದ್ದಾನೆ. ಕೊನೆಗೆ ಪೊಲೀಸರು ಆತನಿಗೆ ತಿಳಿಹೇಳಿ ಶೀಘ್ರದಲ್ಲಿಯೇ ಯುವಕನಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿ ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿ ಗೂಗಲ್ ಸರ್ಚ್ ಮಾಡಿದ ಪಾಪಿ ತಂದೆ!
ಇದೇ ವೇಳೆ ವ್ಯಕ್ತಿ ತನ್ನನ್ನು ಕೆಲಸದಿಂದ ತೆಗೆಯಲಾಗಿದ್ದು, ಸಂಬಳ ಸಹ ನೀಡಿಲ್ಲ. ಆಸ್ಪತ್ರೆಯಲ್ಲಿಯೂ ಮಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಬಾಲಕಿ ತಂದೆ ಕಣ್ಣೀರು ಹಾಕಿದ್ದಾನೆ. ಠಾಣೆಯ ಡಿಸಿಪಿ ವೃಂದಾ ಶುಕ್ಲಾ, ವ್ಯಕ್ತಿಗೆ ಬರಬೇಕಾದ ಸಂಬಳದ ವ್ಯವಸ್ಥೆ ಮಾಡಿ. ತಪ್ಪಿತಸ್ಥನಿಗೆ ಖಂಡಿತ ಶಿಕ್ಷೆಯಾಗಲಿದೆ. ಆಸ್ಪತ್ರೆಯಲ್ಲಿರುವ ಪುತ್ರಿಗೆ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ತನ್ನ ಜೊತೆ ಮಲಗಲು ಒಪ್ಪದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಹಚ್ಚಿದ!