ಠಾಣೆಗೆ ದೂರು ಕೊಡಲು ಬಂದ ಬಾಲಕಿಗೆ ಕಿರುಕುಳ – ಮಂಗಳೂರಿನ ಹೆಡ್ ಕಾನ್ಸ್‌ಟೇಬಲ್ ಅಂದರ್

Public TV
1 Min Read
police

ಮಂಗಳೂರು: ನಗರದ ಠಾಣೆಯೊಂದರ ಹೆಡ್ ಕಾನ್ಸ್‌ಟೇಬಲ್ ಠಾಣೆಗೆ ದೂರು ನೀಡಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿ ಪೋಕ್ಸೋ ಕಾಯ್ದೆಯಡಿ ಅಂದರ್ ಆಗಿದ್ದಾರೆ.

ಜನವರಿ ತಿಂಗಳಲ್ಲಿ ಅಟೋ ಚಾಲಕನೊಬ್ಬ ಚುಡಾಯಿಸುತ್ತಾನೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಪೋಷಕರ ಜೊತೆ ದೂರು ನೀಡಲು ಬಂದಿದ್ದಳು. ಈ ಸಂದರ್ಭ ಬಾಲಕಿಯ ನಂಬರ್ ಪಡೆದುಕೊಂಡಿದ್ದ ಹೆಡ್ ಕಾನ್ ಸ್ಟೇಬಲ್ ಚ್ಯಾಟ್ ಮಾಡಿ ಕಿರುಕುಳ ನೀಡಿದ್ದಾರೆ.

SEXUAL medium

ಕಿರುಕುಳ ಹೆಚ್ಚಾದಂತೆ ಇದೀಗ ದೂರು ನೀಡಿದ್ದು ಮಂಗಳೂರು ಮಹಿಳಾ ಠಾಣೆ ಪೊಲೀಸರು ಆರೋಪಿ ಕಾನ್ಸ್‌ಟೇಬಲ್ ಅನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : ಯುವಕನ ಕೊಲೆಗೈದು ಯುವತಿಗೆ ಬೇರೆಯವನ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ

ಆರೋಪಿಯು ಬಾಲಕಿಗೆ ಎಲ್ಲಿದ್ದೀಯಾ? ಭೇಟಿ ಮಾಡುತ್ತೇನೆ? ಮನೆಯಲ್ಲಿ ಒಬ್ನೆ ಇದ್ದೇನೆ ಬರ್ತೀಯಾ ಎಂದು ಮೆಸೇಜ್ ಮೂಲಕ ಅನುಚಿತವಾಗಿ ವರ್ತಿಸಿದ್ದರು. ಈ ವಿಚಾರವನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದು, ಪೋಷಕರು ವೆಲ್ಫೇರ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

homosexual app

ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಇಲಾಖೆಯ ಸಿಬ್ಬಂದಿ ಆಗಿದ್ರೂ ಸಹ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ದೂರಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Share This Article