ಬೆಂಗಳೂರು: ಟ್ವಿನ್ಸ್ ಮಗು ಎಂದರೆ ನನಗೆ ಇಷ್ಟ. ನನಗೆ ಅವಳಿ ಮಕ್ಕಳೆ ಬೇಕಿತ್ತು. ಆದರೆ ಟ್ವಿನ್ಸ್ ಗಿಂತ ಹೆಚ್ಚಾಗಿ ಇವನು ಹುಟ್ಟಿದ್ದಾನೆ ಎಂದು ಮೇಘನಾ ಸರ್ಜಾ ಖುಷಿ ಹಂಚಿಕೊಂಡರು.
ಇಂದು ನಡೆದ ತೊಟ್ಟಿಲು ಶಾಶ್ತ್ರದ ಸಂಭ್ರಮದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಘನಾ, ಒಂದೇ ಮಗು ಎಂದು ಹೇಳಿ ಅವಳಿ ಮಕ್ಕಳು ಹುಟ್ಟಿರುವುದನ್ನು ಕೇಳಿದ್ದೆನೆ. ನಾನು ಕೂಡಾ ನನಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದುಕೊಂಡಿದ್ದೆ. ನಾನು ಡಾಕ್ಟರ್ ಬಳಿ ನನಗೆ ಅವಳಿ ಮಕ್ಕಳು ಆಗುತ್ತಾ ಎಂದು ವಿಚಾರಿಸಿದ್ದೆ ಎಂದಿದ್ದಾರೆ.
ಮಗು ವಿಚಾರವಾಗಿ ಚಿರು ಮತ್ತು ನನ್ನ ನಡುವೆ ಮಾತುಕತೆ ನಡೆಯುತ್ತಲೆ ಇರುತ್ತಿತ್ತು. ನನಗೆ ಹೆಣ್ಣು ಮಗು ಬೇಕು ಅಂತಾ. ಚಿರು ಇಲ್ಲಾ ನಮಗೆ ಗಂಡು ಮಗುನೇ ಆಗೋದು ಅಂತಾ ಹೇಳುತ್ತಿದ್ದರು. ಚಿರುಗೆ ಮುಂದಾಲೋಚನೆ ಇತ್ತು ಅನ್ನಿಸುತ್ತೆ. ಈಗ ಯೋಚನೆ ಮಾಡಿದ್ರೆ ಅವರ ಇಷ್ಟದಂತೆ ನಮಗೆ ಗಂಡು ಮಗ ಹುಟ್ಟಿದ್ದಾನೆ ಅಂತಾ ಸಂತೋಷ ವ್ಯಕ್ತಪಡಿಸಿದರು.
ಚಿರುನ ಕಳೆದುಕೊಂಡ ಮೇಲೆ ನಾನು ಸ್ಟ್ರಾಂಗ್ ಇದ್ದಿನಾ ಇಲ್ಲವೋ ಗೊತ್ತಿಲ್ಲ. ನಾನು ಇನ್ನು ಬ್ಲ್ಯಾಂಕ್ ಆಗಿಯೆ ಇದ್ದೇನೆ. ಚಿರು ಫ್ಯಾಮಿಲಿ, ಸರ್ಜಾ ಫ್ಯಾಮಿಲಿ ಮತ್ತು ನನ್ನ ಮಗನೆ ನನಗೆ ಧೈರ್ಯವಾಗಿದ್ದಾರೆ. ಚಿರು ಇದ್ರೆ ಏನೆಲ್ಲಾ ಮಾಡಿಸ್ತಾ ಇದ್ದರು ನನ್ನ ಮಗನಿಗೆ ಅದಲ್ಲಾ ನನ್ನ ಕೈಯಿಂದ ಸಾಧ್ಯವಾದಷ್ಟು ನಾನು ಮಾಡುತ್ತಾ ಇದ್ದೇನೆ. ಜೀವನ ಇದೆ ಮುಂದೆ ಸಾಗಲೇ ಬೇಕಾಗಿದೆ. ಮಗನ ಮುಖ ನೋಡಿ ಧೈರ್ಯ ತೆಗೆದುಕೊಂಡಿದ್ದೇನೆ ಎಂದರು.