ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಈ ಕುರಿತು ಕಂಗನಾ ಬೇರೆ ವೇದಿಕೆಯಲ್ಲಿ ನನ್ನ ಧ್ವನಿ ಎತ್ತುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ಟರ್ ಮಂದಿ ಅಮೆರಿಕನ್ನರು ಅಂತ ಸಾಬೀತುಪಡಿಸಿದೆ. ಬಿಳಿ ಜನರು ಕಂದು ಬಣ್ಣದವರನ್ನು ಗುಲಾಮರನ್ನಾಗಿ ಮಾಡಿಕೊಂಡು, ನೀವು ಏನು ಮಾಡಬೇಕು, ಏನು ಹೇಳಬೇಕು, ಏನು ಯೋಚಿಸಬೇಕು ಅಂತ ಹೇಳಲು ಇಷ್ಟಪಡುತ್ತಾರೆ. ಸಿನಿಮಾ ರೂಪದಲ್ಲಿ ನನ್ನ ಧ್ವನಿ ಎತ್ತಲು ನನಗೆ ಸಾಕಷ್ಟು ವೇದಿಕೆಯಿದೆ. ಈ ದೇಶದಲ್ಲಿ ಯಾರಿಗೆ ಹಿಂಸೆ, ದೌರ್ಜನ್ಯ ಸಿಕ್ಕಿದೆಯೋ ಅವರಿಗೆ ಗುಲಾಮತನದಲ್ಲಿ ಬದುಕುತ್ತಿರುವವರಿಗೆ ನನ್ನ ಹೃದಯ ಸದಾ ಮಿಡಿಯುತ್ತಿರುತ್ತದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
View this post on Instagram
ಹಿಂಸಾಚಾರಕ್ಕೆ ಪುಷ್ಠಿ ಕೊಡುವ, ಬೇರೆಯವರ ಮೇಲೆ ದೌರ್ಜನ್ಯ ಮಾಡುವ, ಸಾವನ್ನು ಬಯಸುವ, ಆಶಿಸುವ, ಹಾರೈಸುವ ನಡವಳಿಕೆ ಕಂಡು ಬಂದರೆ ಟ್ವಿಟ್ಟರ್ ಆ ಅಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಟ್ವಿಟ್ಟರ್ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಸಾಕಷ್ಟು ಘಟನೆಗಳು ನಡೆದಾಗ ಆ ಕುರಿತು ಕಂಗನಾ ಮಾತನಾಡಿದ್ದರು. ಅಷ್ಟೇ ಅಲ್ಲದೆ ತನಿಖೆ ಆಗುವ ಮುಂಚೆ ಶಿಕ್ಷೆಗೆ ಆಗ್ರಹಿಸಿದ್ದರು. ಹೀಗಾಗಿ ಕಂಗನಾ ಅವರ ಅಕೌಂಟ್‍ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದನ್ನು ಓದಿ: ಕಂಗನಾ ಟ್ವಿಟ್ಟರ್ ಖಾತೆ ಸಸ್ಪೆಂಡ್