ಬೆಂಗಳೂರು: ಗಾಜಿಯಾಬಾದ್ ವೃದ್ಧನೋರ್ವನ ವೀಡಿಯೋಗೆ ಸಂಬಂಧಿಸಿದಂತೆ ಟ್ವಟರ್ ಇಂಡಿಯಾ ಎಂಡಿ ಮನೀಷ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ಇಂದು ಕರ್ನಾಟಕದ ಹೈಕೋರ್ಟ್ ಉತ್ತರ ಪ್ರದೇಶದ ಪೊಲೀಸರು ನೀಡಿದ ನೋಟಿಸ್ ನ್ನು ವಜಾಗೊಳಿಸಿ ಆದೇಶಿಸಿದ್ದು, ಮನೀಷ್ ಮಹೇಶ್ವರಿಗೆ ತನಿಖೆಗೆ ಸಹಕರಿಸುವಂತೆ ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ಏಕಸದಸ್ಯ ಪೀಠ ಸೂಚನೆ ಸಹ ನೀಡಿದೆ.
ವೃದ್ಧನ ವೀಡಿಯೋಗೆ ಸಂಬಂಧಿಸಿದಂತೆ ಮನೀಷ್ ಮಹೇಶ್ವರಿ ಸೇರಿದಂತೆ ಹಲವರನ್ನು ಉತ್ತರ ಪ್ರದೇಶದ ಪೊಲೀಸರು ಆರೋಪಿ ಸ್ಥಾನದಲ್ಲಿರಿಸಿತ್ತು. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸರು ವರ್ಚುವಲ್ ಮಾಧ್ಯಮ ಅಥವಾ ನೇರವಾಗಿ ಬಂದು ಹೇಳಿಕೆ ದಾಖಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ವೃದ್ಧನೋರ್ವ ವೀಡಿಯೋ ವೈರಲ್ ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಮನೀಷ್ ಮಹೇಶ್ವರಿ ಅವರಿಗೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಈ ಸಂಬಂಧ ಮನೀಷ್ ಮಹೇಶ್ವರಿ ಕರ್ನಾಟಕದ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ
ಮೊದಲಿಗೆ ಸಿಆರ್‍ಪಿಸಿ ಸೆಕ್ಷನ್ 160ರ ಅಡಿ ನೋಟಿಸ್ ನೀಡಲಾಗಿತ್ತು. ಆದ್ರೆ ಮನೀಷ್ ಮಹೇಶ್ವರಿ ಪ್ರತಿಕ್ರಿಯಿಸದ ಹಿನ್ನೆಲೆ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ಶಾಸನಬದ್ಧ ನಿಬಂಧನೆಗಳನ್ನು ಬೆದರಿಕೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗುವುದು. ಉತ್ತರ ಪ್ರದೇಶದ ಪೊಲೀಸರು ಅರ್ಜಿದಾರರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.