ಟ್ರೆಂಡ್ ಆಯ್ತು ಧರ್ಮಸ್ಥಳದ ‘ಎತ್ತಿನ ಬಂಡಿ ಕಾರು’

Public TV
1 Min Read
bullock cart1

– ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ
– ಫೋಟೋ ಹಾಕಿ ಎಲೋನ್ ಮಾಸ್ಕ್ ಗೆ ಸವಾಲು

ಮಂಗಳೂರು: ಧರ್ಮಸ್ಥಳದ ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದ ಎತ್ತಿನ ಬಂಡಿ ಕಾರು ಇದೀಗ ಟ್ವೀಟ್ ವಾರ್‍ಗೆ ಸಾಕ್ಷಿಯಾಗಿದೆ.

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಧರ್ಮಸ್ಥಳದಲ್ಲಿ ಕಂಗೊಳಿಸುತ್ತಿರುವ ನವೀನ ಮಾದರಿಯ ಎತ್ತಿನ ಬಂಡಿ ಕಾರಿನ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ವಿಶ್ವದ ಬಲಿಷ್ಟ ಕಾರು ತಯಾರಿಕ ಕಂಪನಿಗಳಿಗೆ ಚಾಲೆಂಚ್ ಹಾಕಿದ್ದಾರೆ.

darmashtala

ಲಕ್ಷದೀಪೋತ್ಸವ ಸಂದರ್ಭ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಉಜಿರೆಯ ಎಸ್‍ಡಿಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಹೊಸ ಆಲೋಚನೆಯೊಂದಿಗೆ ಹಳೆಯ ಅಂಬಾಸಿಡರ್ ಕಾರಿನ ಹಿಂದಿನ ಭಾಗ ಮತ್ತು 2 ಎತ್ತುಗಳನ್ನು ಬಳಸಿಕೊಂಡು ಹೊಸ ತಲೆಮಾರಿಗೆ ಸರಿಹೊಂದುವ ರೀತಿಯ ಎತ್ತಿನ ಬಂಡಿ ಕಾರು ತಾಯಾರಿಸಿ ಸೈ ಎನಿಸಿಕೊಂಡಿದ್ದರು.

ಮುಂದೆರಡು ಎತ್ತುಗಳ ಸಹಾಯದಿಂದ ಹಿಂದಿನ ಭಾಗದಲ್ಲಿ ಹಳೆಯ ಅಂಬಾಸಿಡರ್ ಕಾರಿನ ಭಾಗವನ್ನು ನವೀಕರಿಸಿ ಕೂರಿಸಲಾಗಿದ್ದು, ಇದನ್ನು ಒಬ್ಬ ರೈತ ಕೂತು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿತ್ತು.

ಇದೀಗ ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಮಹೀಂದ್ರ ಆ್ಯಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರ ಅವರು, ಎಲೆಕ್ಟ್ರಿಕಲ್ ಕಾರು ತಯಾರಿಕ ಟೆಸ್ಲಾ ಕಂಪನಿಯ ಮಾಲೀಕರಾದ ಎಲೋನ್ ಮಸ್ಕ್‍ಗೆ ಕೂಡ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ನಿಮ್ಮಿಂದ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ಟ್ವೀಟ್‍ಗೆ ಸಾವಿರಾರು ನೆಟ್ಟಿಗರು ಲೈಕ್ ಮತ್ತು ಕಮೆಂಟ್‍ಗಳನ್ನು ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *