ನವದೆಹಲಿ: ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ ಸಂಬಂಧ ಪೊಲೀಸರಿಗೆ ಗಾಯ ಮತ್ತು ಹಲವು ವಾಹನಗಳನ್ನು ಧ್ವಂಸ ಮಾಡಿರುವ ಹಿನ್ನೆಲೆ 15 ಎಫ್‍ಐಆರ್ ದಾಖಲು ಮಾಡಲಾಗಿದೆ.
ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಪೊಲೀಸರು 15 ಎಫ್‍ಐಆರ್ ದಾಖಲು ಮಾಡಿದ್ದಾರೆ. ಇನ್ನು ಹೆಚ್ಚಿನ ಎಫ್‍ಐಆರ್ ದಾಖಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ದೆಹಲಿಯ ಮುಖರ್ಬಾ ಚೌಕ್, ಗಾಝಿಫುರ್, ಐಟಿಓ ಸೀಮ್ ಪುರಿ, ನಾಂಗ್ಲೋಯಿ ಟಿ ಪಾಯಿಂಟ್, ಟಿಕ್ರಿ ಗಡಿ, ಕೆಂಪುಕೋಟೆ ಮುಂತಾದ ಕಡೆಯಲ್ಲಿ ಗಲಭೆ ನಿರ್ಮಾಣವಾಗಿತ್ತು. ಈ ವೇಳೆ 7 ಬಸ್, 17 ಖಾಸಗಿವಾಹನಗಳು ಸೇರಿದಂತೆ ಒಟ್ಟು 17 ವಾಹನಗಳನ್ನು ಧ್ವಂಸವಾಗಿವೆ. 86ಕ್ಕೂ ಹೆಚ್ಚು ಪೋಲಿಸರಿಗೆ ಗಾಯಗಳಾಗಿವೆ. ಗಾಜಿಪುರ್ ಮತ್ತು ಟಿಕ್ರಿ ಗಡಿ ಭಾಗಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಧ್ವಂಸ ಮಾಡಲಾಗಿದೆ.
ಶಾಂತಿಯುತವಾದ ರ‍್ಯಾಲಿಯನ್ನು ನಡೆಸಲು ದೆಹಲಿ ಪೊಲೀಸರು ಸಂಯುಕ್ತ ಕಿಸಾನ್ ಮೋರ್ಚಾ ಜೊತೆಯಲ್ಲಿ ಮಾತುಕಥೆಯನ್ನು ನಡೆಸಿತ್ತು. ಆದರೆ ರ‍್ಯಾಲಿ ಪ್ರಾರಂಭವಾಗುತ್ತಿದ್ದಂತೆ ಸ್ವರೂಪವೇ ಬದಲಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ರು ವಿಫಲರಾದರು.