ನೆಲಮಂಗಲ: ಕಾರು ಖರೀದಿ ಮಾಡುವ ನೆಪದಲ್ಲಿ ಅಡ್ವಾನ್ಸ್ ಹಣ ನೀಡಿ ಟ್ರಯಲ್ ಗೆ ಕಾರು ಪಡೆದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಟೌನ್ ಪೊಲೀಸರು ಬಂಧಿಸಿದ್ದಾರೆ.
ಆಪಲ್ ಮಂಜ(35) ಸೆರೆ ಆಗಿರುವ ಆರೋಪಿ, ಈತ ನೆಲಮಂಗಲದ ಸೊಂಡೆಕೊಪ್ಪ ಸರ್ಕಲ್ ನಲ್ಲಿ ವಾಸವಾಗಿದ್ದು ಮೇ.30ರಂದು ಶಿವಕುಮಾರ್ ಎಂಬ ವ್ಯಕ್ತಿಯ ಕಾರು ಖರೀದಿ ಮಾಡುತ್ತೇನೆ ಎಂದು 10 ಸಾವಿರ ಅಡ್ವಾನ್ಸ್ ಹಣವನ್ನು ನೀಡಿ ಕುಣಿಗಲ್ ಬೈಪಾಸ್ ವರೆಗೂ ಟ್ರಯಲ್ ಮಾಡುವುದಾಗಿ ಹೇಳಿ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ನಂತರ ಕರೆ ಮಾಡಿ ಮನೆಯ ಬಳಿಯೇ ಕಾರು ತರುತ್ತೇನೆ ಉಳಿದ ಹಣವನ್ನು ನೀಡುತ್ತೇನೆ ಎಂದು ಯಾಮಾರಿಸಿದ್ದು ಕಾರನ್ನು ಎಸ್ಕೇಪ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಯಾಕೆ ಬಿಜೆಪಿ ಉಸಾಬರಿ? – ಸುಧಾಕರ್ ಪ್ರಶ್ನೆ
ಅನಂತರ ವಾಪಸ್ ಬರದೇ ಫೋನ್ ಸ್ವಿಚ್ ಆಫ್ ಮಾಡಿದ ನಂತರ ಕಾರು ಮಾಲೀಕರು, ಪೊಲೀಸರಿಗೆ ದೂರು ನೀಡಿದ್ದು ಮಂಜುನಾಥ್ ಅಲಿಯಾಸ್ ಆಪಲ್ ಮಂಜನನ್ನು ಬಂಧಿಸಿದ್ದಾರೆ. ಈತ ಈ ಹಿಂದೆ ದಾಬಸ್ ಪೇಟೆ ಠಾಣೆಯಲ್ಲಿ ಕೆಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ನಗರ ಪೊಲೀಸರು ಈತನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಇಡಿಯವರು ಅವರ ಕೆಲಸ ಮಾಡ್ಲೇಬಾರದಾ: ಮಾಧುಸ್ವಾಮಿ ಪ್ರಶ್ನೆ