ಮುಂಬೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಟಿ ಊರ್ವಶಿ ರೌಟೇಲಾ 5 ಲಕ್ಷ ರೂಪಾಯಿಗೂ ಅಧಿಕ ಬೆಲೆಬಾಳುವ ದುಬಾರಿ ಬೆಲೆಯ ಸೀರೆ ತೊಟ್ಟು ಎಲ್ಲಡೆ ಸುದ್ದಿಯಾಗುತ್ತಿದ್ದಾರೆ.
ದುಬಾರಿ ಫ್ಯಾಷನ್ ಆಯ್ಕೆ ಮೂಲಕ ಆಗಾಗ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ಹೈ ಪ್ರೊಫೈಲ್ ಮದುವೆ ಸಮಾರಂಭವೊಂದಕ್ಕೆ ಬರೋಬ್ಬರಿ 4,25,000 ರೂ. ಬೆಲೆಯ ಗುಜರಾತಿ ಪಟೋಲಾ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಇದಿಷ್ಟೆ ಅಲ್ಲ, ಆ ದಿನ ಅವರು ಧರಿಸಿದ ವಜ್ರದ ಆಭರಣಗಳ ಬೆಲೆಯೂ 24,50,000 ರೂಪಾಯಿ ಎನ್ನಲಾಗಿದೆ.
View this post on Instagram
ಸೀರೆ, ಆಭರಣ, ಹೇರ್ ಸ್ಟೈಲ್, ಮೇಕಪ್, ಇತರ ಫ್ಯಾಷನ್ ಸೇರಿದಂತೆ ಆ ಮದುವೆಗೆ ಅವರು ಒಟ್ಟು 58,75,000 ರೂ. ಬೆಲೆಯ ಕಾಸ್ಟ್ಯೂಮ್ ಧರಿಸಿದ್ದರಂತೆ. ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿ ಮನೋಜ್ ಕುಮಾರ್ ಅವರ ಮರಿಮೊಮ್ಮಗಳ ಮದುವೆಯಾಗಿತ್ತು. ಮೆಹಂದಿ ಕಾರ್ಯಕ್ರಮಕ್ಕೆ ಈ ಸಾಂಪ್ರದಾಯಿಕ ಮತ್ತು ದುಬಾರಿ ಕಾಸ್ಟ್ಯೂಮ್ ಧರಿಸಿದ್ದ ಊರ್ವಶಿ ರೌಟೇಲಾ ಅವರ ಆ ವಿಶೇಷ ಸೀರೆಯನ್ನು ತಯಾರಿಸಲು ಸುಮಾರು 70 ದಿನಗಳು ಬೇಕಾದವು ಎಂದು ಅವರ ಸ್ಟೈಲಿಸ್ಟ್ ಹೇಳಿದ್ದಾರೆ. ಇದನ್ನೂ ಓದಿ: ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ
ಸೀರೆಯ ರೇಷ್ಮೆಯ ನೂಲುಗಳಿಗೆ ಬಣ್ಣ ಹಾಕಲು ಸುಮಾರು 70 ದಿನಗಳು ಬೇಕಾಗಿದೆ. ಸೀರೆ ನೇಯಲು 25 ದಿನಗಳು ಬೇಕಾದವು. 600 ಗ್ರಾಂ ರೇಷ್ಮೆ ಬಳಕೆಯಾಗಿರುವ ಈ ಸೀರೆ ತಯಾರಿಕೆಗೆ 12 ಜನರು ಕೆಲಸ ಮಾಡಿದ್ದಾರೆ. ಇದಕ್ಕೆ ಬಳಕೆಯಾಗಿರುವ ವಸ್ತುಗಳಿಂದ ಸಾಮಾನ್ಯ ರೀತಿಯ ಸುಮಾರು 27 ಪಟೋಲಾ ಸೀರೆ ತಯಾರಿಸಬಹುದು ಎಂದು ಅವರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಬಾಲಿವುಡ್ ನಟಿಯರು ಬೆಲೆ ಬಾಳುವ ಸೀರೆಯುಟ್ಟು ಸುದ್ದಿಯಾಗಿದ್ದರು. ಇದೀಗ ಅದೇ ಸಾಲಿಗೆ ಊರ್ವಶಿ ರೌಟೇಲಾ ಸೇರ್ಪಡೆಯಾಗಿದ್ದಾರೆ.
View this post on Instagram
ಕೆಲವು ದಿನಗಳ ಹಿಂದೆ ಮಣ್ಣನ್ನು ಮೈಗೆ ಹಚ್ಚಿಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ದುಬಾರಿಯಾದ ಕಾಸ್ಟ್ಯೂಮ್ ಧರಿಸುವ ಮೂಲಕವಾಗಿ ಸುದ್ದಿಯಗುತ್ತಿದ್ದಾರೆ.
View this post on Instagram