– ಲಾರಿ ಚಾಲಕ ಸ್ಥಳದಿಂದ ಪರಾರಿ, ವಾಹನ ನುಜ್ಜುಗುಜ್ಜು
ಮುಂಬೈ: ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಗರದ ಮುಂಬೈ ಮತ್ತು ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಸಿದ್ಧಾರ್ಥ್ ಭಲೇರಾವ್ (22), ವೈಜನಾಥ್ ಚವಾಣ್ (21) ಮತ್ತು ಆಶೀಶ್ ಪಟೋಲೆ (19) ಎಂದು ಗುರುತಿಸಲಾಗಿದೆ. ಈ ಮೂವರು ಮುಂಬೈನ ವಿಲೇ ಪಾರ್ಲೆ ನಿವಾಸಿಗಳಾಗಿದ್ದು, ವೇಗವಾಗಿ ಬಂದ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಮೂವರು ಎರಡು ಬೈಕ್‍ನಲ್ಲಿ ಶಿರಡಿಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಬೈಕ್‍ಗೆ ಡಿಕ್ಕಿಯಾಗಿದೆ. ಬೈಕ್‍ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಆದರೆ ಬೈಕ್‍ನಲ್ಲಿ ಮೂವರ ಜೊತೆಗೆ ಇದ್ದ ಅನೀಶ್ ವಕ್ಲೆ ಗಾಯಗೊಂಡಿದ್ದಾನೆ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಅಪಘಾತ ಸಂಭವಿಸುತ್ತಿದ್ದಂತೆ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ ಎಂದು ಅಂಬಾದ್ಲೀಪೊಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.