ನವದೆಹಲಿ: ಆನೆಯೊಂದು ಚಲಿಸುತ್ತಿರುವ ಟ್ರಕ್‍ಗೆ ಅಡ್ಡಹಾಕಿ ತನ್ನ ಸೊಂಡಿಲಿನಿಂದ ಒಳಗೆ ಇರುವ ಬಾಳೆಹಣ್ಣನ್ನು ತೆಗೆದುಕೊಂಡು ತಿಂದಿರುವ ವಿಡಿಯೋ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಆನೆಯ ವಿಡಿಯೋವನ್ನು ಟ್ವೀಟ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆನೆಯ ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಹೆದ್ದಾರಿಯಲ್ಲಿ ಆನೆಯನ್ನು ನೋಡುತ್ತಿದ್ದಂತೆ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸುತ್ತಾನೆ. ನಂತರ ಆನೆಯು ತನ್ನ ಸೊಂಡಿಲನ್ನು ಒಳಗೆ ಹಾಕಿ ಟ್ರಕ್ ಒಳಗೆ ಇರುವ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸುತ್ತದೆ.
ಟ್ರಕ್ ಚಾಲಕನ ಸಹಚರರೊಬ್ಬರು ಆನೆಗೆ ಟ್ರಕ್‍ನಲ್ಲಿರುವ ಆಹಾರ ಪದಾರ್ಥಗಳಲ್ಲಿ ಕೆಲವು ಬಾಳೆಹಣ್ಣುಗಳನ್ನು ಆನೆಗೆ ಕೊಡುತ್ತಾನೆ. ಆಗ ಆನೆ ತನ್ನ ಸೊಂಡಿಲಿನಿಂದ ಬಾಳೆಹಣ್ಣನನ್ನು ಹೊರಗೆ ಎಳೆದುಕೊಂಡು ತಿನ್ನುತ್ತದೆ.
ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡಬೇಡಿ ಎಂಬ ಸೂಚನೆಯ ಬೋರ್ಡ್ ಅನ್ನು ನೀವು ನೋಡುತ್ತೀರಿ. ಪ್ರಾಣಿಗಳಿಗೆ ಹೊಸ ರುಚಿಯ ಅಭ್ಯಾಸವಾಗುತ್ತವೆ. ರಸ್ತೆಗೆ ಮತ್ತು ಮನುಷ್ಯರ ಹತ್ತಿರ ಪ್ರಾಣಿಗಳು ಬರುತ್ತದೆ. ಇದು ಪ್ರಾಣಿಗಳಿಗೆ ತುಂಬಾ ಸಮಯದವರೆಗೆ ಸಹಾಯಕವಾಗುವುದಿಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಖತ್ ವೈರಲ್ ಆಗಿದೆ.
Daylight robbery on a highway. A forward. pic.twitter.com/QqGfa90gF5
— Parveen Kaswan, IFS (@ParveenKaswan) November 11, 2020