ವಾಷಿಂಗ್ಟನ್: ಅಮೆರಿಕದಲ್ಲಿ ಟ್ರಂಪ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಅಧಿಕಾರವಧಿ ಮುಗಿಯುವ ಜ.20ಕ್ಕೂ ಮೊದಲೇ ಟ್ರಂಪ್ ಅವರನ್ನು ಪದವಿಯಿಂದ ತೊಲಗಿಸಬೇಕು ಎಂಬ ಎಂಬ ಬೇಡಿಕೆ, ಒತ್ತಡ ಹೆಚ್ಚುತ್ತಿದೆ.
ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಅನ್ವಯ ಟ್ರಂಪ್‍ರನ್ನು ಪದವಿಯಿಂದ ಕೆಳಗಿಳಿಸಬೇಕು ಎಂದು ಡೆಮಾಕ್ರೆಟಿಕ್ ಪಕ್ಷದ ಸದಸ್ಯರು ಮತ್ತು ಕೆಲ ರಿಪಬ್ಲಿಕನ್ನರು, ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲದೇ ಇದ್ದರೇ, ಮಹಾಭಿಯೋಗದ ಮೂಲಕ ಟ್ರಂಪ್‍ರನ್ನು ವಾಗ್ದಂಡನೆಗೆ ಒಳಪಡಿಸಿ ಅಧ್ಯಕ್ಷ ಪದವಿಯಿಂದ ವಜಾ ಮಾಡೋದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
Advertisement
Advertisement
Advertisement
ಟ್ರಂಪ್ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ವ್ಯಕ್ತಿ. ಈತನನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ವಿಶೇಷಾಧಿಕಾರ ಬಳಸಬೇಕು ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿ ಹಲವರು ಒತ್ತಾಯಿಸಿದ್ದಾರೆ. ಮಹಾಭಿಯೋಗ ಅಥವಾ ಸಂವಿಧಾನದ 25ನೇ ತಿದ್ದುಪಡಿ ಅನ್ವಯ ಕ್ರಮದ ಪೈಕಿ ಯಾವುದೇ ಪ್ರಕ್ರಿಯೆ ನಡೆದರೂ ಟ್ರಂಪ್‍ಗೆ ತೀವ್ರ ಮುಖಭಂಗ ಆಗುತ್ತದೆ. ಹೊಸ ಅಧ್ಯಕ್ಷರ ಪದಗ್ರಹಣದವರೆಗೆ ಉಪಾಧ್ಯಕ್ಷರು ತಾತ್ಕಾಲಿಕವಾಗಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಬೇಕಾಗುತ್ತದೆ.
Advertisement
ಏನಿದು ಅಮೆರಿಕಾ ಸಂವಿಧಾನದ 25ನೇ ತಿದ್ದುಪಡಿ?
1963ರಲ್ಲಿ ಜಾನ್ ಎಫ್ ಕೆನಡಿ ಹತ್ಯೆ ಬಳಿಕ ಅಮೆರಿಕಾ ಸಂವಿಧಾನಕ್ಕೆ 25ನೇ ತಿದ್ದುಪಡಿ ಮಾಡಲಾಗಿದೆ. ಅಧ್ಯಕ್ಷರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದಾಗ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡದಿದ್ದ ಸಂದರ್ಭದಲ್ಲಿ 25ನೇ ತಿದ್ದುಪಡಿಯ ಮೂಲಕ ಉಪಾಧ್ಯಕ್ಷರು ಸಂಪುಟ ಸಭೆ ನಡೆಸಿ ಅಧ್ಯಕ್ಷರನ್ನು ವಜಾ ಮಾಡಬಹುದು. ಸಂಪುಟ ಸಭೆಯಲ್ಲಿ ವೋಟಿಂಗ್ ನಡೆಯುತ್ತದೆ. ಅಧ್ಯಕ್ಷರ ವಿರುದ್ಧ ಹೆಚ್ಚು ಮತ ಬಿದ್ದರೆ ವಜಾ ಮಾಡಲಾಗುತ್ತದೆ.
ಮಹಾಭಿಯೋಗ ಹೇಗೆ?
ಕಾಂಗ್ರೆಸ್ ಪ್ರತಿನಿಧಿಗಳ ಸಭೆಗೆ ಈ ಮಹಾಭಿಯೋಗದ ಅಧಿಕಾರವಿದೆ. ಅಧ್ಯಕ್ಷರು ಅಪರಾಧ ಎಸಗಿದರೆ 435 ಸದ್ಯಸರ ಸಭೆಯಲ್ಲಿ ಮಹಾಭಿಯೋಗ ತೀರ್ಮಾನ ತೆಗೆದುಕೊಳ್ಳಬಹುದು. ಸಾಮಾನ್ಯ ಮೆಜಾರಿಟಿಯಿಂದ ಈ ತೀರ್ಮಾನಕ್ಕೆ ಗೆಲುವಾದಲ್ಲಿ ಸೆನೆಟ್‍ಗೆ ಕಳಿಸಲಾಗುತ್ತದೆ. ಸೆನೆಟ್‍ನಲ್ಲಿ ವಿಚಾರಣೆ ನಡೆದು 2/3ನೇ ಬಹುಮತದಿಂದ ಅಧ್ಯಕ್ಷರನ್ನು ಕೆಳಗೆ ಇಳಿಸಬಹುದು. ಈ ಎಲ್ಲಾ ಪ್ರಕ್ರಿಯೆಯನ್ನು ಕೇವಲ ಒಂದೇ ದಿನದಲ್ಲಿ ಮುಗಿಸಬಹುದು.