-ಯುವಕನ ಪೋಷಕರಿಗೆ ಹೇಳಿದ್ರೆ ವಿದ್ಯಾರ್ಥಿನಿಗೆ ಬೆದರಿಕೆ
ಲಕ್ನೋ: ಟ್ಯೂಷನ್ ನಿಂದ ಬರೋವಾಗ ಯುವಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗೊರಖ್‍ಪುರನಲ್ಲಿ ನಡೆದಿದೆ.
ಮಗಳು ಪಕ್ಕದೂರಿನಿಂದ ಟ್ಯೂಷನ್ ಮುಗಿಸಿಕೊಂಡು ಗ್ರಾಮಕ್ಕೆ ಬರುತ್ತಿರುವ ವೇಳೆ ಯುವಕನೋರ್ವ ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ನಾವು ಯುವಕನ ಪೋಷಕರಿಗೆ ಹೇಳಿದ್ರೆ ನಮಗೆ ಬೆದರಿಕೆ ಹಾಕಿದರು. ಮನೆಗೆ ಬಂದ ಮಗಳು ತನ್ನ ಕೋಣೆ ಸೇರಿಕೊಂಡಳು. ಕೆಲ ಸಮಯದಲ್ಲಿ ಆಕೆಯ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯ್ತು ಎಂದು ಸಂತ್ರಸ್ತೆ ತಂದೆ ದೂರಿನಲ್ಲಿ ದಾಖಲಿಸಿದ್ದಾರೆ.
ಬಾಲಕಿಯ ದೇಹ ಶೇ.80 ರಷ್ಟು ಬೆಂಕಿಗಾಹುತಿಯಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ 20 ಗಂಟೆಯ ನಂತರ ಮೃತಪಟ್ಟಿದ್ದಾಳೆ. ಯುವಕ ಮತ್ತು ಆತನ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 326, 305, 504 ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಯುವಕ ಮತ್ತು ಆತನ ತಂದೆ-ತಾಯಿಯನ್ನು ಬಂಧಿಸಲಾಗಿದೆ.